ಜಿಲ್ಲೆ

ಮೈನವಿರೇಳಿಸಿದ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆ

ಗಮನ ಸೆಳೆದ ಆಲ್ ಇಂಡಿಯಾ ಯೋಗಾಸನ ಚಾಂಪಿಯನ್ ಶಿಪ್-2022 ಸ್ಪರ್ಧೆ

ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳಿಂದ ನಡೆದ ಆಲ್ ಇಂಡಿಯಾ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ ಶಿಪ್-2022 ಭಾನುವಾರ ಸಂಜೆ ಸಮಾರೋಪಗೊಂಡಿತು.

ಆಲ್ ಇಂಡಿಯಾ ಯೋಗ ಫೆಡರೇಷನ್, ರಂಜು ಆರ್ಟ್ಸ್ ಯೋಗ ಟ್ರಸ್ಟ್ ಹಂಪಿ ಸಹಯೋಗದಲ್ಲಿ ನಡೆದ ಈ ಬೃಹತ್ ಸ್ಪರ್ಧೆಯಲ್ಲಿ ಯೋಗ ಪಟುಗಳು ಲೀಲಾಜಾಲವಾಗಿ ಹಲವು ಭಂಗಿಗಳನ್ನು ಪ್ರದರ್ಶಿಸಿ, ನೋಡುಗರ ಗಮನ ಸೆಳೆದರು. ಯೋಗ ಅಧ್ಯಯನ ಪೀಠದ ನಿರ್ದೇಶಕ ಎಫ್.ಟಿ.ಹಳ್ಳಿಕೇರಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮೋಹನ್ ಚಿಕ್ಕ ಜೋಶಿ, ದಿವ್ಯಕುಮಾರಿ ಡಾನ್, ಉಮೇಶ್ ಜಾಗಿರ್ದಾರ್, ಫಕ್ರುದ್ದೀನ್, ಪ್ರಶಾಂತ್ ಕೆ. ಇದ್ದರು. ಹಂಪಿ ಪ್ರವಾಸಿ ಮಾಗದರ್ಶಿ ವಿರೂಪಾಕ್ಷಿ ವಿ. ಕಾರ್ಯಕ್ರಮ ನಿರ್ವಹಿಸಿದರು.

ಇವರು ಬಹುಮಾನ ಪಡೆದವರು:

8 ರಿಂದ 11 ವರ್ಷದ ಬಾಲಕಿಯರ ವಿಭಾಗದಲ್ಲಿ ಪಶ್ಚಿಮ ಬಂಗಾಳದ ನೀರಾದತ್ತ ಮೈಟಿ(ಪ್ರಥಮ), ಕರ್ನಾಟಕದ ಸಂಸ್ಕೃತಿ(ದ್ವಿತೀಯ) ಹಾಗೂ ಕರ್ನಾಟಕದ ಫರಾಹ್ ಜಿ., ಎಸ್.ಪೂಜಾ, ನವ್ಯಾ ಹಾಗೂ ತಮಿಳುನಾಡಿನ ಶಿರೀನ್ ಅಗ್ನೇಸ್‌ಮೇಟಿ ತೃತೀಯ ಸ್ಥಾನ ಪಡೆದರು.

15 ರಿಂದ 17 ವರ್ಷದ ಬಾಲಕಿಯರ ವಿಭಾಗದಲ್ಲಿ ಗುಜರಾತ್‌ನ ಝೀಲ್ ವ್ಯಾಸ್(ಪ್ರಥಮ), ತಲಂಗಾಣದ ಚೊಲ್ಲೆಟ್ಟಿ ಸಾಯಿ ನಿಶ್ವಿತ(ದ್ವಿತೀಯ), ಒಡಿಶಾದ ಶಾರದ ಪರಮಿಥಾ ಬಿ., ಕರ್ನಾಟಕದ ನಾಗಮ್ಮ ಹಾಗೂ ಗುಜರಾತ್‌ನ ಹನ್ಯಾ ಪಟೇಲ್ ತೃತೀಯ ಸ್ಥಾನ ಪಡೆದುಕೊಂಡರು.

18 ರಿಂದ 35 ವರ್ಷದ ಮಹಿಳೆಯರ ವಿಭಾಗದಲ್ಲಿ ಪಶ್ಚಿಮ ಬಂಗಾಳದ ರೂಪಾಲಿ ಮೈಟಿ(ಪ್ರಥಮ), ಒಡಿಶಾದ ಸ್ವೇತಾ ರೌಟರಿ(ದ್ವಿತೀಯ), ತಮಿಳುನಾಡಿನ ವಿಜಯಲಕ್ಷ್ಮೀ, ಗುಜರಾತ್‌ನ ಫಾಲಗುನಿ ಗೋಸ್ವಾಮಿ ಹಾಗೂ ತಮಿಳುನಾಡಿನ ಪಿ.ಕವಿತಾ ತೃತೀಯ ಸ್ಥಾನದಲ್ಲಿ ಜಯ ಗಳಿಸಿದ್ದಾರೆ.

8 ರಿಂದ 11 ವರ್ಷ ಬಾಲಕರ ವಿಭಾಗದಲ್ಲಿ ಒಡಿಶಾದ ಸಾಯಿ ಪ್ರಕಾಶ ನಾಯಕ್(ಪ್ರಥಮ), ಗುಜರಾತ್‌ನ ಎಸ್.ಜೋಶಿ(ದ್ವಿತೀಯ), ತೆಲಂಗಾಣದ ಎ.ಹೃತ್ವಿಕ್, ಎ.ಸ್ರೀವಾಂಜಿ, ಕರ್ನಾಟಕದ ಶ್ಯಾಮ್ ಬಿ.ತೃತೀಯ ಸ್ಥಾನ ಪಡೆದುಕೊಂಡರು.

18 ರಿಂದ 35 ವರ್ಷದ ಪುರುಷರ ವಿಭಾಗದಲ್ಲಿ ಒಡಿಶಾದ ಸ್ಮಾರ್ಕ್‌ದೇವ್(ಪ್ರಥಮ), ಚತ್ತೀಸ್‌ಘಡದ ವಿನಾಂಶು(ದ್ವಿತೀಯ), ಒಡಿಶಾದ ಹರಿ ಓಂ ಪತಿ, ಚತ್ತೀಸ್‌ಘಡದ ರಾಧೇಶ್ಯಾಮ್ ಹಾಗೂ ಗುಜರಾತ್‌ನ ಹರ್ಷ ಪಟೇಲ್ ತೃತೀಯ ಸ್ಥಾನ ಪಡೆದುಕೊಂಡರು.

ದೇಶದ 15 ರಾಜ್ಯಗಳಿಂದ 400 ಯೋಗ ಪಟುಗಳು ಆಗಮಿಸಿದ್ದರು. 5 ವಿಭಾಗಗಳಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಚಿನ್ನದ ಪದಕ, ದ್ವಿತೀಯ ಬಹುಮಾನ ಬೆಳ್ಳಿ ಹಾಗೂ ತೃತೀಯ ಬಹುಮಾನ ಕಂಚಿನ ಪದಕ ನೀಡಲಾಯಿತು.