ಮರಿಯಮ್ಮನಹಳ್ಳಿ: ರಂಗಕರ್ಮಿಗಳು ಮತ್ತು ಕಲಾವಿದರು ಹೆಚ್ಚಾಗಿ ಅಧ್ಯಯನಶೀಲರಾಗುವುದರ ಜತೆಗೆ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ವಿಶಿಷ್ಠ ದೃಷ್ಟಿಕೋನ ಹೊಂದಿದಾಗ ಮಾತ್ರ ಉತ್ತಮ ನಾಟಕ ಮತ್ತು ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗಲಿದೆ ಎಂದು ಉಪನ್ಯಾಸಕ ಎಂ.ಸೋಮೇಶ್ ಉಪ್ಪಾರ್ ಹೇಳಿದರು.
ಇಲ್ಲಿನ ದುರ್ಗಾದಾಸ ಕಲಾಮಂದಿರದಲ್ಲಿ ಭಾನುವಾರ ರಾತ್ರಿ ರಂಗಬಿAಬ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಪ್ರಾಯೋಜಿತ ಕಾರ್ಯಕ್ರಮದಡಿಯಲ್ಲಿ ಸುಗಮ ಸಂಗೀತ ಹಾಗೂ ಸೀತಾ ಮಂಡೋದರಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದು ಕ್ಷೀಣಿಸುತ್ತಿದೆ. ಆದ್ದರಿಂದ ವಿದ್ಯಾಭ್ಯಾಸದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಬೆಳಸಿಕೊಂಡು ಹೋಗುವುದು ಬಹಳ ಮುಖ್ಯ. ಪ್ರತಿಯೊಬ್ಬರೂ ತಮ್ಮ ವೃತ್ತಿಯ ಜತೆಗೆ ರಂಗಕಲೆಯನ್ನು ಹವ್ಯಾಸವಾಗಿರಿಸಿಕೊಳ್ಳಬಹುದು. ಇದರಿಂದ ಆರೋಗ್ಯಕರವಾದ ಉತ್ತಮ ಸಮಾಜವನ್ನು ಕಟ್ಟುವ ಸಾಧ್ಯತೆ ಇದೆ ಎಂದರು.
ಪ.ಪA. ಉಪಾಧ್ಯಕ್ಷೆ ಲಕ್ಷಿö್ಮÃ ರೋಗಾಣಿ ಕಾರ್ಯಕ್ರಮ ಉದ್ಘಾಟಿಸಿದರು. ರಂಗಬಿAಬದ ಅಧ್ಯಕ್ಷೆ ಎಂ.ಗಾಯತ್ರಿದೇವಿ ಅಧ್ಯಕ್ಷತೆ ವಹಿಸಿದ್ದರು. ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ನಾಗರತ್ನಮ್ಮ, ರಂಗ ಶಿಕ್ಷಕ ಈಡಿಗರ ವೆಂಕಟೇಶ್, ಪ.ಪಂ. ಸದಸ್ಯರಾದ ಪೂಜಾ, ಕೆ.ಮಂಜುನಾಥ, ಲಲಿತ ಕಲಾರಂಗದ ಅಧ್ಯಕ್ಷ ಎಚ್.ಮಂಜುನಾಥ, ರಂಗಬಿAಬದ ಕಾರ್ಯದರ್ಶಿ ಸಿ.ಕೆ.ನಾಗರಾಜ, ಕಲಾವಿದರಾದ ಸಂತೋಷ ಕುಮಾರ್ ಚಂದುಕರ, ಸರದಾರ ಬಿ.ಸೋನು, ಇತರರಿದ್ದರು.
ಜಿ.ಸೋಮಣ್ಣ ಗೊಲ್ಲರಹಳ್ಳಿ ತಂಡದವರಿAದ ಸುಗಮ ಸಂಗೀತ ನಡೆಯಿತು. ನಂತರ ಬಸವರಾಜ ತಂಡದವರಿAದ ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂ ಮಾಹಕಾವ್ಯದಿಂದ ಆಯ್ದ ಭಾಗವನ್ನು ಆಧರಿಸಿದ ಸರದಾರ ಬಿ. ನಿರ್ದೇಶನದಲ್ಲಿ ಸೀತಾ ಮಂಡೋದರಿ ನಾಟಕ ಪ್ರದ್ರರ್ಶನಗೊಂಡಿತು.
ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ನಾಗರತ್ನಮ್ಮ, ರಂಗಬಿAಬದ ಅಧ್ಯಕ್ಷೆ ಎಂ.ಗಾಯತ್ರಿದೇವಿ, ಕಾರ್ಯದರ್ಶಿ ಸಿ.ಕೆ.ನಾಗರಾಜ, ಉಪನ್ಯಾಸಕ ಎಂ.ಸೋಮೇಶ್ ಉಪ್ಪಾರ್ ಇತರರಿದ್ದರು.