ಜಿಲ್ಲೆ

ಬಡವರಿಗೆ ನಿವೇಶನ ಹಂಚಿಕೆ ಮಾಡಿ

ಮಂಜುನಾಥ

ಹೊಸಪೇಟೆ: ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಸಿಪಿಐಎಂ ಪಕ್ಷದಿಂದ ಇಲ್ಲಿನ ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಎಸ್ಸಿ, ಎಸ್ಟಿ, ಒಬಿಸಿ ಬಡಜನರು ನಿವೇಶನಕ್ಕಾಗಿ 2015ರಲ್ಲಿ 8 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಹೋರಾಟದ ಮೂಲಕ ನಗರಸಭೆಗೆ ಅರ್ಜಿ ಸಲ್ಲಿಸಿದರು. ಅಂದಿನ ಅಧಿಕಾರಿಗಳು ಜನರಿಗೆ ಭರವಸೆ ನೀಡಿದ್ದರು. ಆದರೆ, 10 ವರ್ಷ ಕಳೆದರು ಭರವಸೆ ಈಡೇರಿಸದೇ ವಂಚಿಸಲಾಗಿದೆ. ಜನರಿಗೆ ಆಡಳಿತದಮೇಲೆ ನಂಬಿಕೆ ಎಂಬುದು ಕಳೆದು ಹೋಗಿದೆ ಎಂದು ಆಗ್ರಹಿಸಿದರು.

ಸಿಪಿಐ(ಎಂ) ಪಕ್ಷದಿಂದಲೂ ಜನ ಪ್ರತಿದಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರ, ಈಗಿನ ಶಾಸಕರು ಪ್ರಯತ್ನ ಮಾಡದೇ ಕೇಂದ್ರ ಸರ್ಕಾರದ ಪಿಎನ್‌ವೈ ಯೋಜನೆ ಅಡಿಯಲ್ಲಿ ಅಪಾರ್ಟ್ ಮೆಂಟ್ ಮನೆಗಳ ಜಿ+2ರೂಪದಲ್ಲಿ ನೀಡಲು ಮುಂದಾಗಿರುವುದು ಅಸಂಬದ್ಧವಾಗಿದೆ. ನಗರದ ಸುತ್ತಮುತ್ತ ನೂರಾರು ಎಕರೆ ಸರ್ಕಾರಿ ಜಮೀನಿರುವ ಮಾಹಿತಿ ನೀಡಲಾಗಿದೆ. ಆದರೆ, ತಮ್ಮ ಲಾಭಕ್ಕಾಗಿ ಸಾರ್ವಜನಿಕ ಆಸ್ತಿಗಳನ್ನು ಅತಿ ಕಡಿಮೆ ಬೆಲೆಗೆ ನೀಡಲು ಮುಂದಾಗಿದ್ದಾರೆ. ನಿವೇಶನಕ್ಕಾಗಿ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಿ ನಿವೇಶನ ಹಂಚಿಕೆ ಮಾಡಬೇಕು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿರುವ ಮಾನದಂಡಗಳನ್ನು ವಾಪಾಸ್ ಪಡೆದು, 200 ರೂ. ಶುಲ್ಕ ಕಡಿಮೆ ಮಾಡಲು ಸೆಂಟರ್‌ಗಳಿಗೆ ಸೂಚನೆ ನೀಡಬೇಕು. ಮಳೆಗಾಲ ಆರಂಭವಾದ ಕಾರಣಕ್ಕಾಗಿ ರಸ್ತೆಗಳು ಗುಂಡಿಗಳನ್ನು ಮುಚ್ಚಬೇಕು. ಕಲುಷಿತಗೊಂಡ ಮಿಶ್ರಿತ ನೀರು ಸರಬರಾಜು ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪಕ್ಷದ ಕಾರ್ಯದರ್ಶಿ ಎನ್.ಯಲ್ಲಾಲಿಂಗ, ಪ್ರಮುಖರಾದ ಆರ್.ಭಾಸ್ಕರ್ ರೆಡ್ಡಿ, ಕೆ.ಎಂ.ಸ್ವಪ್ನ, ಶಕುಂತಲಾ, ಈ.ಮಂಜುನಾಥ, ಹೇಮಂತ್ ನಾಯ್ಕ್ ಇತರರಿದ್ದರು.