ಹೊಸಪೇಟೆ: ವಿಜಯನಗರ ಕ್ಷೇತ್ರವು ಪ್ರವಾಸಿಗರ ಪ್ರಮುಖ ತಾಣವಾಗಿದೆ. ಒಳ ರಸ್ತೆಗಳಿಂದ ಪ್ರವಾಸಿಗರಿಗೆ ಇನ್ನಷ್ಟು ಅನುಕೂಲವಾಗಲಿದೆಯಲ್ಲದೆ ರೈತರು ತಮ್ಮ ಹೊಲಗಳಿಗೆ ನಿರಾಯಾಸವಾಗಿ ತಲುಪಲು ಒಳ ರಸ್ತೆಗಳು ಮುಖ್ಯವಾಗಲಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ಹೊಸಪೇಟೆ ತಾಲೂಕಿನ ಬೈಲುವದ್ದಗೇರಿ ಗ್ರಾಮ ಮತ್ತು ಇಪ್ಪಿತೇರಿ ಮಾಗಣಿಯಲ್ಲಿ ಸೋಮವಾರ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ನಮ್ಮ ಸರ್ಕಾರವಿದೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ವಿಚಾರವಾಗಿ ಅನುದಾನ ಕಾಡಿ ಬೇಡಿಯಾದರೂ ತರಬೇಕು. ಆದರೆ ಹೊರಗಿನವರ ಮಾತುಗಳು ಅನವಶ್ಯಕವಾಗಿ ಪ್ರತಿಕ್ರೀಯೆ ನೀಡಬಾರದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೀರಾಜ್ ಶೇಕ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಹೊಸಪೇಟೆಯಿಂದ ಬಳ್ಳಾರಿಗೆ ಹೋಗುವ ಹೆದ್ದಾರಿ ಕಾಮಗಾರಿಯು ವಿಳಂಬವಾಗುತ್ತಿದೆ. ಕಾಮಗಾರಿ ಗುತ್ತಿಗೆ ಪಡೆದವರಿಗೆ ತ್ವರಿತಗತಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಹಾಗೂ ಸಣ್ಣಪುಟ್ಟ ಸಮಸ್ಯೆಗಳಿಗೆ ಕಾಮಗಾರಿಯನ್ನು ವಿಳಂಬಮಾಡ ಬಾರದು. ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ ಎಂದು ರಾಷ್ಟಿçÃಯ ಹೆದ್ದಾರಿ ಗುತ್ತಿಗಾರರಿಗೆ ತಿಳಿಸಿಲಾಗಿದೆ. ಸಾರ್ವಜನಿಕರಿಗೆ ಮನೆಗಳಿಗೆ, ಶೌಚಾಲಯ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
20.24 ಕೋಟಿ ಅನುದಾನದಲ್ಲಿ ಬೈಲುವದ್ದಿಗೇರಿ ಯಿಂದ ಹೊಸ ಚಿನ್ನಾಪುರಕ್ಕೆ 6.90 ಕಿಲೋಮೀಟರ್ ಹೊಸ ಎಂಡಿಆರ್ ರಸ್ತೆ ಅಭಿವೃದ್ಧಿ ಹಾಗೂ ಹೊಸಪೇಟೆಯ ಚಿತ್ತವಾಡಿಗಿ ಯಿಂದ ಇಪ್ಪತೇರಿ ಮಾಗಣಿಯವರೆಗೆ 4 ಕಿಲೋಮೀಟರ್ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು 7.40 ಕೋಟಿ ವೆಚ್ಚದಲ್ಲಿ ಬೆಲ್ಲ ಕಾಂಕ್ರೀಟ್ ಕಾಲುವೆ ಆಧುನಿಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿದ ಶಾಸಕ, ಕಾಮಗಾರಿ ಗುಣಮಟ್ಟ ಹಾಗೂ ಬೇಗನೆ ಪೂರ್ಣಗೊಳಿಸಬೇಕು ಎಂದರು.
ತಹಸೀಲ್ದಾರ್ ಶೃತಿ ಎಂ.ಮಳ್ಳನಗೌಡ್ರ, ಹೊಸೂರು ಗ್ರಾ.ಪಂ. ಅಧ್ಯಕ್ಷೆ ಕಿಚಡಿ ಜಯಪದ್ಮ, ಬೈಲುವದ್ದಿಗೇರಿ ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ, ಪಿಡಿಓ ಹನುಮಂತಪ್ಪ ಇತರರಿದ್ದರು.