ಹೊಸಪೇಟೆ: ಗಣಿಗಾರಿಕೆಯಲ್ಲಿ ಸುರಕ್ಷತಾ ಕ್ರಮಗಳು ನಿರಂತರ ಸುಧಾರಣೆಯಾಗಬೇಕು ಎಂದು ಬಳ್ಳಾರಿಯ ಡಿಜಿಎಂಎಸ್ ಬಿಪುಲ್ ಬಿಹಾರಿ ಸತಿಯರ್ ಹೇಳಿದರು.
ಗಣಿ ಸುರಕ್ಷತಾ ನಿರ್ದೇಶನಾಲಯದ ಅಡಿಯಲ್ಲಿ ಕರ್ನಾಟಕ ಗಣಿ ಸುರಕ್ಷತಾ ಸಂಘ, ಕೆಎಸ್ ಎಂಸಿಎಲ್ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ನಡೆದ ಗಣಿ ಸುರಕ್ಷತಾ ಸಪ್ತಾಹದ ಸಮಾರೋಪದಲ್ಲಿ ಮಾತನಾಡಿದರು. ಗಣಿಗಾರಿಕೆ ಉದ್ಯಮದಲ್ಲಿ ಕಾರ್ಮಿಕರ ರಕ್ಷಣೆ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುತ್ತದೆ ಎಂದರು.
ಕೆಎಸ್‌ಎAಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜಯಭಾವ ಸ್ವಾಮಿ ಮಾತನಾಡಿ, ಗಣಿಗಾರಿಕೆ ವಲಯದಲ್ಲಿ ಸುರಕ್ಷತಾ ಅಭ್ಯಾಸಗಳ ಪ್ರಗತಿ ಅಗತ್ಯ. ಗಣಿಗಾರರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಖಾತ್ರಿಪಡಿಸುವಲ್ಲಿ ತಂತ್ರಜ್ಞಾನ ಮತ್ತು ಶಿಕ್ಷಣದ ಪಾತ್ರ ಅಗತ್ಯ ಎಂದರು.
ಅತ್ಯುತ್ತಮ ಸುರಕ್ಷತಾ ಅಭ್ಯಾಸ ಮತ್ತು ಹೆಚ್ಚಿನ ಸುರಕ್ಷತಾ ಮಾನದಂಡವನ್ನು ನಿರ್ವಹಿಸುವಲ್ಲಿನ ಸಾಧನೆ ಗುರುತಿಸಿ ಗಣಿಗಾರಿಕೆ ವಲಯಗಳಿಗೆ ಪ್ರಶಸ್ತಿ ಮತ್ತು ಬಹುಮಾನ ವಿತರಿಸಲಾಯಿತು.
ಎಂಎಸ್‌ಪಿಲ್ ಸಿಇಒ ಕೆ.ಮಧುಸೂದನ್, ಗಣಿ ಸುರಕ್ಷತೆ ಉಪನಿರ್ದೇಶಕ ನಾಗೇಂದ್ರ ಕುಮಾರ್ ಶ್ರೀರಾಮ್ ಇದ್ದರು.