ಜಿಲ್ಲೆ

ಯೋಗ ಜೀವನದ ಭಾಗವಾಗಲಿ

ಮಂಜುನಾಥ

ಹೊಸಪೇಟೆ: ನಮ್ಮ ನಿತ್ಯದ ದುಡಿಮೆಯ ಜತೆ ಯೋಗವೂ ಜೀವನದ ಭಾಗವಾಗಬೇಕು. ನಾವು ಎಷ್ಟೇ ದುಡಿದರು ಆರೋಗ್ಯವಿಲ್ಲದಿದ್ದರೆ ವ್ಯರ್ಥವಾಗಲಿದೆ ಎಂದು ನಗರಸಭೆಯ ಅಧ್ಯಕ್ಷ ರೂಪೇಶ ಕುಮಾರ ಹೇಳಿದರು.

ಬಲಿದಾನ ದಿವಸ್ ನಿಮಿತ್ತ ನಗರದ ಪತಂಜಲಿ ಯೋಗ ಸಮಿತಿ ಮಹಾಲಕ್ಷ್ಮಿ ಯೋಗ ಕೇಂದ್ರದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯೋಗ ಧ್ಯಾನ ಪ್ರಣಾಯಾಮದ ಶಿಬಿರದಲ್ಲಿ ಮಾತನಾಡಿದರು ನಾವು ನಿತ್ಯವೂ ಒತ್ತಡದಲ್ಲಿ ಬದುಕುತ್ತಿದ್ದು ನಮ್ಮ ಮಾನಸಿಕ ದೈಹಿಕ ನೆಮ್ಮದಿಗೆ ಯೋಗ ಸಹಕಾರಿಯಾಗಲಿದೆ ಎಂದರು.

ನಗರಸಭೆ ಉಪಾಧ್ಯಕ್ಷ ಎಸ್.ಜೆ.ರಮೇಶ ಗುಪ್ತಾ ಮಾತನಾಡಿ, ನಗರದ ಎಲ್ಲಾ ಉದ್ಯಾನವನದಲ್ಲಿ ಯೋಗ ನಡೆಯಲು ಬೇಕಾದ ಅಗತ್ಯ ಮೂಲಸೌಕರ್ಯಗಳನ್ನು ನಗರಸಭೆ ಮಾಡಲಿದೆ ಎಂದರು.

ರಾಜ್ಯ ಯುವ ಪ್ರಭಾರಿ ಕಿರಣ್ ಕುಮಾರ ಮಾತನಾಡಿ, ದೇಶದ ಸ್ವಾತಂತ್ರ‍್ಯಕ್ಕಾಗಿ ತಮ್ಮ ಚಿಕ್ಕವಯಸ್ಸಿನಲ್ಲೇ ಪ್ರಾಣಾರ್ಪಣೆ ಮಾಡಿದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ ರವರ ತ್ಯಾಗ ಬಲಿದಾನಗಳನ್ನು ನೆನದರು. ಪ್ರತಿನಿತ್ಯವೂ ಬೇಗ ಮಲಗುವ, ಬ್ರಾಹ್ಮಿ ಮೂಹರ್ತದಲ್ಲಿ ಏಳುವ ಹಾಗೂ ಪ್ರತಿನಿತ್ಯವೂ ಸರಳವಾದ ಯೋಗಮಾಡುವ ಅಭ್ಯಾಸ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಉತ್ತಮ ಜೀವನ ನಮ್ಮದಾಗುತ್ತದೆ ಎಂದು ಒತ್ತಡದ ಮಧ್ಯ ಮಾಡಬಹುದಾದ ಸರಳ ಯೋಗ ಹಾಗೂ ಪ್ರಾಣಾಯಾಮಗಳನ್ನು ತಿಳಿಸಿಕೊಟ್ಟರು.

ನಗರಸಭೆಯ ಸದಸ್ಯೆ ಕನಕಮ್ಮ, ಪ್ರಮುಖರಾದ ವಿರೂಪಾಕ್ಷ ಗೌಡ, ಹನುಮಂತಪ್ಪ, ಡಾ.ಎಫ್.ಟಿ.ಹಳ್ಳಿಕೇರಿ, ಬಾಲಚಂದ್ರ ಶರ್ಮಾ, ರಾಜೇಶ ಕರ್ವಾ, ಮಂಗಳಮ್ಮ, ವೀರೇಶ, ಶ್ರೀಧರ, ವಿಠೋಬ ಬಲ್ಲೂರು ಇತರರಿದ್ದರು.