ಹಂಪಿ ವಿಜಯವಿಠಲದಲ್ಲಿ ಕಲ್ಲಿನರಥದ ಬಿಕೋ ಎನ್ನುತ್ತಿರುವುದು. 
ಜಿಲ್ಲೆ

ಗೈಡ್ ಗಳು ತುಟಿಪಿಟಕ್ ಎನ್ನುವಂತ್ತಿಲ್ಲ

ಮಂಜುನಾಥ

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ವಿಶ್ವದ ಗಮನ ಸೆಳೆದಿರುವ ತಾಣ ಹಂಪಿ ಮೂಲಸೌಲಭ್ಯ ಕೊರತೆ ಸೇರಿದಂತೆ ಅವ್ಯವಸ್ಥೆಗಳಿಂದ ಆಗಾಗ ಸುದ್ದಿ ಆಗುತ್ತದೆ. ಆದರೆ ಈ ವಿಚಾರಗಳೆಲ್ಲ ಪ್ರವಾಸಿ ಮಾರ್ಗದರ್ಶಿಗಳೇ ಮಾಧ್ಯಮಗಳಿಗೆ ತಿಳಿಸುತ್ತಾರೆಂಬ ಕಾರಣ ನೀಡಿ ಪ್ರವಾಸೋದ್ಯಮ ಇಲಾಖೆ ಇಂಥ ಹೇಳಿಕೆ ನೀಡದಿರಲು ಹಾಗೂ ಆದೇಶ ಉಲ್ಲಂಘಿಸಿದರೆ ಗೈರ್ಡ್ ಕಾರ್ಡ್ ರದ್ದತಿ ಮತ್ತು ಗೌರವ ಧನ ತಡೆಯುವ ಎಚ್ಚರಿಕೆ ನೀಡಿ ಅಧೀಕೃತ ಜ್ಞಾಪನಾ ಪತ್ರ ಹೊರಡಿಸಿದ್ದು, ಚರ್ಚೆಗೆ ಗ್ರಾಸವಾಗಿದೆ.

ಹಂಪಿ ಪ್ರವಾಸೋದ್ಯಮಕ್ಕೆ ಮಾತ್ರವಲ್ಲ ಐತಿಹಾಸಿ, ಧಾರ್ಮಿಕ ತಾನವಾಗಿರುವುದರಿಂದ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರು ಇಲ್ಲಿ ಭೇಟಿ ನೀಡುತ್ತಾರೆ. ಆದರೆ, ಇಲ್ಲಿ ಮೂಲಸೌಕರ್ಯ ಸೇರಿದಂತೆ ಇತರೆ ಕೊರತೆಗಳು ಸಾಲು ಸಾಲು ಕಾಣುತ್ತವೆ. ಹಂಪಿಗೆ ಬಂದ ಪ್ರವಾಸಿಗರಿಗೆ ಕುಡಿವ ನೀರು ಕೂಡ ಇಲ್ಲಿ ಸಿಗುವುದಿಲ್ಲ. ಇನ್ನೂ ಪ್ರವಾಸಿಗರಿಗೆ ನಂಬಿರುವ ಸ್ಥಳೀಯರು, ವ್ಯಾಪರಸ್ತರು, ಮಾರ್ಗದರ್ಶಿಗಳಿಗೆ ಸಮಸ್ಯೆಗಳ ಸರಮಾಲೆ ಇದೆ. ಹಂಪಿ ಕೆಲ ಪ್ರಮುಖ ಘಟನೆಗಳು ಹಾಗೂ ಸಮಸ್ಯೆಗಳನ್ನು ಮಾರ್ಗದರ್ಶಿಗಳು ಮಾತ್ರವಲ್ಲ ಸ್ಥಳೀಯ ನಿವಾಸಿಗಳು, ರಕ್ಷಣ ಸಿಬಂಧಿಗಳು, ರಾಜ್ಯ ಹಾಗೂ ಕೇಂದ್ರ ಪುರಾತತ್ವ, ಹಂಪಿ ನಿರ್ವಾಹಣ ಪ್ರಾಧಿಕಾರದ ನೌಕರ ಸೇರಿದಂತೆ ಕೆಲ ಪ್ರವಾಸಿಗಳು ಕೂಡ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾರೆ. ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗಿ ಸಮಸ್ಯೆಗಳಿಗೆ ಪರಿಹಾರ ಕೂಡ ಸಿಕ್ಕಿವೆ. ಇನ್ನೂ ಪರಿಹಾರ ಕಾಣದ ಹಲವು ವಿಷಯಗಳಿವೆ. ಆದರೆ, ಇದರಿಂದ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಮುಜುಗರ ಆಗುತ್ತಿದ್ದು, ಹಂಪಿಯ ಯಾವುದೇ ಮಾಹಿತಿ ನೀಡದಂತೆ ಇಲಾಖೆಯ ಅಧೀಕೃತ ಜ್ಞಾಪನಾ ಪತ್ರ ಮಾರ್ಗದರ್ಶಿಗಳಿಗೆ ಮಾಯಿ ಮುಚ್ಚುವಂತೆ ಮಾಡಿದೆ.

ಪ್ರವಾಸಿಗರು ಅಥವ ಪ್ರವಾಸಿ ತಾಣಗಳಿಗೆ ಸಂಬAಧಿಸಿದAತೆ ಮಾರ್ಗದರ್ಶಿಗಳಲ್ಲಿ ಯಾವುದೇ ಸಮಸ್ಯೆಗಳು, ಬೇಡಿಕೆಗಳು ಇದ್ದಲ್ಲಿ ಪ್ರವಾಸೋದ್ಯಮ ಇಲಾಖೆಯ ಅಥವಾ ಜಿಲ್ಲಾಡಳಿತದ ಗಮನಕ್ಕೆ ತಂದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಇದನ್ನು ಹೊರತು ಪಡಿಸಿ ಪ್ರವಾಸಿ ಮಾರ್ಗದರ್ಶಿಗಳು ನೇರವಾಗಿ ಪತ್ರಿಕೆಗಳಲ್ಲಿ ಹೇಳಿಕೆ ನೀಡುತ್ತಿದ್ದಿರಿ. ಇದಂದ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ ಇರುತ್ತದೆ. ಸರ್ಕಾರಕ್ಕೆ ಮುಜುಗರ ಉಂಟಾಗುವAತೆ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿರುತ್ತದೆ. ಮಾರ್ಗದರ್ಶಿಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿನ ಚೀಟಿ ನೀಡಲಾಗಿದೆ. ಪ್ರತಿ ತಿಂಗಳು 5 ಸಾವಿರ ರೂ. ಮಾಸಿಕ ಗೌರವಧನ ಸಹ ನೀಡಲಾಗುತ್ತಿದೆ. ಒಬ್ಬ ಜವಾಬ್ದಾರಿಯುತ ಪ್ರವಾಸಿ ಮಾರ್ಗದರ್ಶಿಗಳಾಗಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರತಿನಿಧಿಗಳಾಗಿ ಮೇಲಾಧಿಕಾರಿಗಳ ಆದೇಶಗಳನ್ನು ಆಗಾಗ ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ಸೂಚಿಸಿದೆ. ತಪ್ಪಿದ್ದಲ್ಲಿ ಇಲಾಖೆಯಿಂದ ನೀಡಲಾಗಿರುವ ಮಾರ್ಗದರ್ಶಿ ಕಾರ್ಡ್ ರದ್ದು ಪಡಿಸಿ, ಗೌರವಧನವನ್ನು ತಡೆಹಿಡಿಯಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ದೂಷಿಸುವುದು ಸರಿಯಲ್ಲ

ರಾಜ್ಯದಲ್ಲಿ ಹಲವು ಪ್ರವಾಸಿ ತಾಣಗಳಿವೆ. ಅಲ್ಲಿ ಕೂಡ ರಾಜ್ಯ ಸರ್ಕಾರದ ಪ್ರವಾಸಿ ಮಾರ್ಗದರ್ಶಿಗಳಿದ್ದಾರೆ. ಅಲ್ಲಿಯೂ ಸಮಸ್ಯೆ, ಘಟನೆಗಳ ಸುದ್ದಿಗಳು ಬರುತ್ತವೆ. ಆದರೆ, ಮಾದ್ಯಮಗಳಿಗೆ ಹೇಳಿಕೆ ನೀಡದಂತೆ ಪ್ರವಾಸೋದ್ಯಮ ಇಲಾಖೆ ನಿರ್ಬಂಧ ಹಾಕಿರುವುದು ಹಂಪಿ ಪ್ರವಾಸಿ ಮಾರ್ಗದರ್ಶಿಗಳಿಗೆ ಮಾತ್ರ. ಇದರಿಂದ ನಮ್ಮ ವೈಯಕ್ತಿಕ ಸಮಸ್ಯೆಗಳು ಕೂಡ ಹೇಳದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರೇ ಹೇಳಿದರು ನಮ್ಮ ಮೇಲೆ ಆರೋಪ ಬರುತ್ತದೆ. 5 ಸಾವಿರ ಗೌರವಧನಕ್ಕಾಗಿ ಎಲ್ಲಿಯೂ ಮಾತನಾಡದಂತಾಗಿದೆ ಎಂದು ಮಾರ್ಗದರ್ಶಿಗಳ ಮಾತಾಗಿದೆ.

ಪ್ರವಾಸಿ ಮಾರ್ಗದರ್ಶಿಗಳು ಕೂಡ ಸರ್ಕಾರದ ಒಂದು ಭಾಗ. ಇಲಾಖೆ ಹಾಗೂ ಸರ್ಕಾರದ ವಿರುದ್ಧ ಹೇಳಿಕೆ ನೀಡುವಂತ್ತಿಲ್ಲ. ಸಮಸ್ಯೆಗಳಿದ್ದರೆ ಗಮನಕ್ಕೆ ತಂದರೆ ಪರಿಹರಿಸಲಾಗುತ್ತದೆ. ಅದಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡುವಂತ್ತಿಲ್ಲ. ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ