ಹೊಸಪೇಟೆ: ಕರ್ನಾಟಕ ನಾಗರೀಕ ಹಿತರಕ್ಷಣಾ ಸೇವಾ ಟ್ರಸ್ಟ್ ನಿಂದ 24ನೇ ವರ್ಷದ ಉಚಿತ ಸರ್ವ ಧರ್ಮ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಕಾಸಿಟ್ಟಿ ಉಮಾಪತಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾತಿ, ಧರ್ಮಗಳ ಬೇಲಿಯನ್ನು ದಾಟಿ ಸರ್ವ ಸಮುದಾಯಗಳ ಜನರನ್ನು ಒಗ್ಗೂಡಿಸಿಕೊಂಡು ನಡೆಸುವ ಉಚಿತ ಸಾಮೂಹಿಕ ವಿವಾಹಗಳಿಂದ ಬಡವರಿಗೆ ಅನುಕೂಲವಾಗಿತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಕಲುಷಿತಗೊಳ್ಳುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಸಾಮರಸ್ಯದಿಂದ ಬದುಕುವುದಕ್ಕೆ ಪ್ರೇರೇಪಿಸುತ್ತವೆ. ಆದ್ದರಿಂದ 24 ವರ್ಷದಿಂದ ನಿರಂತರವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಾ.27ರಂದು ನಗರದ ಶ್ರೀ ಪ್ರಸನ್ನ ಆಂಜನೇಯ ದೇಗುಲದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಮಾ.20ರೊಳಗೆ ಸರ್ವಧರ್ಮಿಯರು ನೊಂದಾಣಿ ಮಾಡಿಕೊಳ್ಳಬಹುದು. ಮಾಂಗಲ್ಯ, ಕೈಗಡಗ, ಬಟ್ಟೆ ಹಾಗೂ ಮದುವೆ ಬೇಕಾಗಿರುವ ಸಾಮಾಗ್ರಿಗಳು, ಬರುವ ಅಥಿತಿಗಳಿಗೆ ಹಾಗೂ ಸಾರ್ವಜನಿಕರಿಗೆ ಮದುವೆ ಊಟದ ವ್ಯವಸ್ಥೆ ಇರಲಿದೆ ಎಂದರು.
ಈ ಹಿಂದೆ 30 ರಿಂದ 40 ಜೋಡಿಗಳ ಮಾಡುತ್ತಿದ್ದೇವು. ಕೆಲ ವರ್ಷದಿಂದ ಸಾಮೂಹಿಕ ಮದುವೆ ಆಗುವ ಜೋಡಿಗಳು ಕಡಿಮೆ ಬರುತ್ತಿವೆ. ದುಂದು ವೆಚ್ಚದ ಮೆದುವೆ ಮಾರು ಹೋಗುತ್ತಿದ್ದಾರೆ. ಮೂರು ಜಿಲ್ಲೆಯಲ್ಲಿ ಕಾರ್ಯಕ್ರಮದ ಪ್ರಚಾರ ಮಾಡುತ್ತಿದ್ದೇವೆ. ಹೆಚ್ಚಿನ ಜೋಡಿಗಳ ನೊಂದಾಣಿ ಎಂಬ ಆಶಾ ಭಾವ ಇದೆ. ಈ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಸಹಕಾರ ಬೇಕಿದೆ ಎಂದರು.
ಉಪಾಧ್ಯಕ್ಷ ಗೌಳಿರುದ್ರಪ್ಪ, ಪ್ರಮುಖರಾದ ಅನುರಾಧ, ಲಲಿತಾ, ರೇಣುಕಾ ಬಾಯಿ, ಗುಜ್ಜಲ್ ರಾಮೇಶ್, ಬಿ.ಜೆ.ಕವಿತಾ, ಚಂದ್ರು ದೇವಲಾಪುರ, ತಿರುಮಲೇಶ್, ಬಸವರಾಜ್ ಗೌಳಿ, ಎಂ.ಬಿ.ಉಮಾ, ಜಯಶ್ರೀ ಇತರರಿದ್ದರು.