ಹೊಸಪೇಟೆ: ಶ್ರಾವಣ ಮಾಸ ಹಾಗೂ ಶ್ರೀ ಗೂಳ್ಯದ ಗಾದಿಲಿಂಗೇಶ್ವರ 31ನೇ ವರ್ಷದ ಪುರಾಣದ ನಿಮಿತ್ತ ತಾಲೂಕಿನ ಪಾಪಿನಾಯಕನಹಳ್ಳಿಯ ಶ್ರೀ ವೀರಾಂಜನೇಯ ದೇವಸ್ಥಾನದ ಆವರಣದಲ್ಲಿ ಭಾನುವಾರ ಉಚಿತ ಸಾಮೂಹಿಕ ವಿವಾಹದ ನಡೆದವು.
ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಸರಳ ವಿವಾಹಗಳನ್ನು ಪ್ರತಿಯೊಂದು ಸಂಘ ಸಂಸ್ಥೆಗಳು ಆಯೋಜಿಸುವ ಮೂಲಕ ಸವi ಸಮಾಜದ ನಿರ್ಮಾಣ ಮಾಡಬೇಕು. ಸಾಮೂಹಿಕ ವಿವಾಹಗಳು ಅರ್ಥಿಕವಾಗಿ ಬಡವರಿಗೆ ವರದಾನವಾಗಲಿದೆ. ಅರ್ಥಿಕ ಸಂಕಷ್ಠದಿಂದ ಕಡಿಮೆಯಾಗಲಿದೆ ಎಂದರು.
ಅಂಕಲಿಮಠದ ಶ್ರೀ ನಿರುಪಧೀಶ್ವರ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವದಿಸಿದರು. ಪ್ರಮುಖರಾದ ಗೊಗ್ಗ ರಾಜಣ್ಣ, ಕೆ.ಎಂ.ಹಾಲಪ್ಪ, ಮೇಟಿ ಪಂಪಾಪತಿ, ತಿಪ್ಪೇಸ್ವಾಮಿ, ಡಿ.ರಾಮು, ವಿ.ಗುರುರಾಜ ಇತರರಿದ್ದರು.