oplus_0 
ಜಿಲ್ಲೆ

ಕಲಾವಿದರಿಗೆ ಸರ್ಕಾರದ ನೆರವು ಸಿಗಲಿ

ಮಂಜುನಾಥ

ಮರಿಯಮ್ಮನಹಳ್ಳಿ: ಕಲಾವಿದರ ಜೀವನ ಬಹಳ ಕಷ್ಟವಿದೆ. ಅವರ ನೆರವಿಗೆ ಸರ್ಕಾರ ಧಾವಿಸವೇಕು, ಆಗ ಮಾತ್ರ ಕಲಾವಿದರ ಬದುಕು ಹಸನವಾಗುತ್ತದೆ ಎಂದು ಪದ್ಮಶ್ರೀ ಮಂಜಮ್ಮ ಜೋಗತಿ ಹೇಳಿದರು.

ಇಲ್ಲಿನ ದುರ್ಗಾದಾಸ್ ಕಲಾಮಂದಿರದಲ್ಲಿ  ರಂಗಬಿಂಬದ 3ನೇವರ್ಷದ ವಾರ್ಷಿಕೋತ್ಸವ ಹಾಗೂ ಸಂಗ್ಯಾ- ಬಾಳ್ಯ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಕಲಾವಿದರ ಬದುಕು ಹಸನಾಗಲು ಕನ್ನಡಮತ್ತುಸಂಸ್ಕೃತಿ ಇಲಾಖೆಯು ಅನುದಾನನೀಡಬೇಕು. ಬಡಕಲಾವಿದರಿಗೆ ಹಾಗು ಕಲಾಸಂಸ್ಥೆಗಳ ನೆರವಿಗೆ ಧಾವಿಸಬೇಕು ಎಂದರು.

ಮರಿಯಮ್ಮನ ಹಳ್ಳಿಗೆ ಬುಡ್ಡೆಕಲ್ಲಿಗೆ ಬಹುಶಃ ಕಲಾವಿದರೇ, ಮೊದಲೇ ಬುನಾದಿ ಹಾಕಿದ್ದ ಹಾಗೆ ಇದ್ದಾರೆ. ಈ ಹಿಂದೆ ಮರಿಯಮ್ಮನ ಹಳ್ಳಿಯಲ್ಲಿ ಬೆಳಗಾಗೋವರೆಗೆ ನಾಟಕ, ಬಯಲಾಟ ಪ್ರದರ್ಶನಗೊಳ್ಳುತ್ತಿದ್ದವು. ರಂಗಬಿಂಬ ಕಲಾತಂಡಕ್ಕೆ  ಮೂರು ವರ್ಷಗಳಾದವು, ನನ್ಮ ಸಹಕಾರ ಎಂದು ಕೂಡ ಇರಲಿದೆ ಎಂದರು.

ಆರ್ಯವೈಶ್ಯಸಮಾಜದ ಅಧ್ಯಕ್ಷ‌ ಚಿದ್ರಿಸತೀಶ್ ಮಾತನಾಡಿ, ಮರಿಯಮ್ಮನಹಳ್ಳಿ ಕಲಾವಿದರ ತವರೂರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ನಮ್ಮೂರು ಕಲಾವಿದರು ಬೆಳೆಯಲು ಎಲ್ಲರೂ ಸಹಕಾರ ನೀಡಬೇಕು. ಟಿ.ವಿ.ನೋಡುವುದನ್ನು ಬಿಟ್ಟು ನಾಟಕಗಳನ್ನು ನೋಡಿದಾಗಲೇ ಕಲಾವಿದರ ಕಲೆಗೆ ವೀಕ್ಷಕರು ನಾವು ಗೌರವಕೊಟ್ಟಂತಾಗುತ್ತದೆ ಎಂದರು.

ರಂಗಬಿಂಬ ಟ್ರಸ್ಟ್ ನ ಅಧ್ಯಕ್ಷೆ ಗಾಯತ್ರಿದೇವಿ ಅಧ್ಯಕ್ಷತೆವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಸಿ.ಕೆ.ನಾಗರಾಜ, ಹಿರಿಯ ಕಲಾವಿದ ಕೆ.ನಾಗೇಶ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ‌.ನಾಗರತ್ನಮ್ಮ, ಪಂಚಗ್ಯಾರಂಟಿ ಅಧ್ಯಕ್ಷ ಶಿವಮೂರ್ತಿ, ಪಪಂ‌ ಅಧ್ಯಕ್ಷ ಆದಿಮನಿ ಹುಸೇನ್ ಬಾಷ, ಸದಸ್ಯ ಕೆ.ಮಂಜುನಾಥ, ಲಲಿತಕಲಾರಂಗದ ಉಪಾಧ್ಯಕ್ಷ ಜೆ.ಎಂ.ಕೊಟ್ರೇಶ, ಕಾನಿಪ‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಲಕ್ಷಣ್, ಪ್ರಮುಖರಾದ ಎಂ.ಕೀರ್ತಿರಾಜಜೈನ್, ಗೊವಿಂದರ ಪರಶುರಾಮ, ರೋಗಾಣಿ ಮಂಜುನಾಥ ಇತರರಿದ್ದರು.