ಹೊಸಪೇಟೆ: ಹೊಸಪೇಟೆ-ಮಂಗಳೂರು ರೈಲು ಸಂಚರ ಆರಂಭವಾಗಲಿ ಎಂದು ನಗರದ ನಿಲ್ದಾಣದಲ್ಲಿ ಶುಕ್ರವಾರ ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿ ಪದಾಧಿಕಾರಿಗಳು ರೈಲ್ವೇ ಪ್ರಾದೇಶಿಕ ಅಧಿಕಾರಿ ಮುಕೇಶ್ ಕುಮಾರ್ ಮನವಿ ಪತ್ರ ಸಲ್ಲಿಸಿದರು.
ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್ ಮಾತನಾಡಿ, ವಿಶ್ವವಿಖ್ಯಾತ ಹಂಪಿಯಿAದ ಪ್ರವಾಸಿ ತಾಣಗಳಾದ ಹಾಸನ, ಹಳೆಬೀಡು, ಬೇಲೂರು, ಶ್ರಣಬೆಳಗೋಳ, ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ, ಹಾಗೂ ಶೈಕ್ಷಣಿಕ ಮತ್ತು ಬೃಹತ್ ಆಸ್ಪತ್ರೆ ಕೇಂದ್ರಗಳಾದ ಮಣಿಪಾಲ-ಉಡುಪಿ-ಮಂಗಳೂರಿಗೆ ನೇರ ರೈಲು ಆರಂಭಿಸಬೇಕು. ಇದರಿಂದ ರಾಜ್ಯದಲ್ಲಿ ಪ್ರವಾಸೋಧ್ಯಮ ಮತ್ತು ಆರ್ಥಿಕ ಚಟುವಟಿಕೆಗಳು ಹೆಚ್ಚಾರಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತವೆ. ಅಲ್ಲದೇ ವಿಜಯನಗರ ಜಿಲ್ಲೆ ಮತ್ತು ಬಂದರು ನಗರ ಮಂಗಳೂರಿಗೆ ನೇರ ಸಂಪರ್ಕ ದೊರೆತು, ವ್ಯಾಪಾರ ವಹಿವಾಟುಗಳು ವೃದ್ದಿಯಾಗುತ್ತದೆ. ಆದ್ದರಿಂದ ಕೊಟ್ಟೂರು ಮಾರ್ಗವಾಗಿ ನಗರದಿಂದ ಮಂಗಳೂರಿಗೆ ನೇರ ರೈಲ್ವೇ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ಉಮಾಮಹೇಶ್ವರ್ ಮಾತನಾಡಿ, ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಪ್ರಸಿದ್ದ ಯಾತ್ರಾಸ್ಥಳ ಮಂತ್ರಾಲಯ ಮಾರ್ಗವಾಗಿ ಈ ಹಿಂದೆ ಸಂಚರಿಸುತ್ತಿದ್ದ ರೈಲನ್ನು ಕಳೆದ 4 ತಿಂಗಳಿAದ ಸಂಚಾರ ರದ್ದುಪಡಿಸಿದ್ದಾರೆ. ಮಂತ್ರಾಲಯ ಹಾಗೂ ರಾಯಚೂರು, ಹೈದ್ರಬಾದ್ ಕಡೆಗೆ ಹೋಗುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ಕೂಡಲೇ ರೈಲನ್ನು ಪುನಃ ಆರಂಭಿಸಬೇಕು. ನಿಲ್ದಾಣದಲ್ಲಿ ಹೆಚ್ಚವರಿ ಎರಡು ಪ್ಲಾಟ್‌ಫಾರಂಗಳನ್ನು ನಿರ್ಮಿಸಬೇಕೆಂದು ಆಗ್ರಹಿಸಿದರು.
ಪ್ರಮುಖರಾದ ಮಹೇಶ್ ಕುಡುತಿನಿ, ಕೌತಾಳ್ ವಿಶ್ವನಾಥ್, ಎಲ್.ರಮೇಶ್ ಲಮಾಣಿ, ಸಿದ್ದಪ್ಪ, ಬಿ.ವಿರುಪಾಕ್ಷಪ್ಪ, ಪಿ.ಪ್ರಭಾಕರ್, ಡಿ.ರಾಮಕೃಷ್ಣ, ಎಂ.ಶAಕ್ರಪ್ಪ, ಕೆ.ವಿ.ರಾಮಾಲಿ, ಮಲ್ಲಯ್ಯ, ಎಚ್.ಮಹೇಶ್, ನಜೀರ್ ಸಾಬ್, ಶಂಶುದ್ದೀನ್, ಬಿ.ಮಹಮ್ಮದ್ ಜಮೀರ್, ಯು.ಆಂಜನೇಯಲು, ಹೆಚ್.ತಿಪ್ಪೇಸ್ವಾಮಿ, ಲೋಗನಾಥನ್, ಎಸ್.ಟಿ.ಮುಂಡರಗಿ, ಡಿ.ಜಗದೀಶ್, ಶೇಕ್‌ಮಹಮ್ಮದ್ ಬಾಷಾ, ಸಣ್ಣ ಮಾರೆಪ್ಪ, ದೇವರೆಡ್ಡಿ, ಮಹಾಂತೇಶ್, ಜೆ.ವರುಣ್ ಇತರರಿದ್ದರು.