ಹೊಸಪೇಟೆ: ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲ್ವಿ ಜಲಾಶಯದ ಮಣ್ಣಿನ ಗೋಡೆ ಶನಿವಾರ ಹೊಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.
2.50 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಜಲಾನಯನ ಪ್ರದೇಶದಿಂದ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಆದ್ದರಿಂದ ಹಾಕಲಾಗಿದ್ದ ತಡೆಗೋಡೆ ಒಡೆದು ನೀರು ಹರಿಯಲಾರಭಿಸಿದೆ. ರೈತರ ಜಮೀನುಗಳಿಗೆ ಪೂರೈಕೆಯಾಗಬೇಕಾದ ನೀರು ಅಪಾರ ಪ್ರಮಾಣದಲ್ಲಿ ಪೋಲಾಗುತ್ತಿದೆ.
ಕಳೆದ 3 ತಿಂಗಳಿಂದಲೂ ಮಾಲವಿ ಜಲಾಶಯದ ಒಟ್ಟು 10 ಕ್ರೈಸ್ಟ್ ಗೇಟ್ ದುರಸ್ಥಿ ಕಾರ್ಯ ಮುಂದುವರಿದಿದೆ. ಒಟ್ಟು 4 ಕೋಟಿ ರೂ.ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಂಡ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಈವರೆಗೂ ಕೇವಲ 4 ಗೇಟ್‌ಗಳ ದುರಸ್ಥಿ ಸಾಧ್ಯವಾಗಿದೆ. ದುರಸ್ಥಿ ಹಿನ್ನೆಲೆಯಲ್ಲಿ ಗೇಟ್ ಬಳಿ ನೀರು ಸಂಗ್ರಹವಾಗದಂತೆ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ, ತಡೆಗೋಡೆಯಲ್ಲಿ ಕಾಣಿಸಿಕೊಂಡ ಬಿರುಕು ದೊಡ್ಡದಾದ ಪರಿಣಾಮ ಸಂಗ್ರಹಗೊಂಡ ಅಷ್ಟೂ ನೀರು ಪೋಲಾಗಿ ಹರಿದು ನದಿಪಾಲಾಗಿದೆ. ಅಧಿಕಾರಿಳು ಮತ್ತು ಜನಪ್ರತಿಧಿಗಳ ಕಚ್ಛಾಶಕ್ತಿ ಕೊರತೆಯೆ ನೀರು ಪೋಲಾಹರಿಯಲು ಕಾರಣ ಎಂಬುದು ರೈತರ ಇಂಗಿತವಾಗಿದೆ. ಕಾಮಗಾರಿ ವೇಗಪಡೆದುಕೊಳ್ಳದೆ ನೀರು ಪೋಲಾಗಿ ಹರಿದಿರುವುದಕ್ಕೆ ರೈತರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.