ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹೊಸಪೇಟೆಯ ತ್ರೈತ ಸಿದ್ಧಾಂತ ಪ್ರಬೋಧ ಸೇವಾ ಸಮಿತಿಯಿಂದ ಶ್ರೀ ಕೃಷ್ಣ ಪ್ರತಿಮೆಯ ಮೆರವಣಿಗೆ ಮಾಡಲಾಯಿತು. 
ಜಿಲ್ಲೆ

ಶ್ರೀಕೃಷ್ಣ ಪ್ರತಿಮೆ ಮೆರವಣಿಗೆ ಅದ್ದೂರಿ

ನರೇಶ್ ಕುಮಾರ್

ಹೊಸಪೇಟೆ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತ್ರೈತ ಸಿದ್ಧಾಂತ ಪ್ರಬೋಧ ಸೇವಾ ಸಮಿತಿಯಿಂದ ಸ್ಥಳೀಯ ಪಟೇಲ್ ನಗರದಲ್ಲಿ ಭಾನುವಾರ ಶ್ರೀಕೃಷ್ಣ ಪ್ರತಿಮೆ ಮೆರವಣಿಗೆ ನಡೆಯಿತು.

ವೇದಿಕೆಯ ಸಂಚಾಲಕ ವೀರಯ್ಯ ಪಲ್ಲಿ ಮಾತನಾಡಿ, ಭಗವಂತ ಮಾನವನಾಗಿ ಅವತರಿಸಿ ಮಾನವನಾಗಿ ಜನ್ಮ ತಾಳಿದರೆ ಆತನನ್ನು ದೇವರು ಎನ್ನುತ್ತೇವೆ. ಅಂತಹ ದೇವರನ್ನು ಶ್ರೀ ಕೃಷ್ಣ ಎಂದು ಕರೆಯುತ್ತೇವೆ. ಆತನನ್ನು ಮಾತ್ರ ಎಲ್ಲರೂ ಪರಮಾತ್ಮನೆಂದು ಗುರುತಿಸಬೇಕು ಎಂದು ತಿಳಿಸಿದರು.

ಬಿಜೆಪಿ ಕಚೇರಿಯಿಂದ ಆರಂಭಗೊಂಡ ಮೆರವಣಿಗೆ ಕನಕದಾಸ ವೃತ್ತ, ಶಾನಭಾಗ ಸರ್ಕಲ್ ಮಾರ್ಗವಾಗಿ ಮೂಲ ಸ್ಥಾನಕ್ಕೆ ಮರಳಿತು. ಬಿಜೆಪಿ ಯುವ ಮುಖಂಡ ಸಿದ್ಧಾರ್ಥ ಸಿಂಗ್, ಹೊಸಪೇಟೆ ಸಮಿತಿ ಸದಸ್ಯರಾದ ಶ್ರೀದೇವಿ, ರಾಘವೇಂದ್ರ ಶ್ರೇಷ್ಠಿ, ಲಕ್ಷ್ಮೀ ರೆಡ್ಡಿ, ಶ್ರೀನಿವಾಸುಲು, ಕೃಷ್ಣ, ಸುಧಾಕರ, ಅರುಣಾ ಹಾಗೂ ಕೃಷ್ಣವೇಣಿ ಭಾಗವಹಿಸಿದ್ದರು.