ಹೊಸಪೇಟೆ: ಎಂಎಸ್‌ಪಿಎಲ್ ಸಂಸ್ಥೆ ಹಾಗೂ ಜೈಪುರ ಭಗವಾನ್ ಮಹಾವೀರ್ ಅಂಗವಿಕಲರ ಸಹಕಾರ ಸಮಿತಿಯಿಂದ ಆ.24 ರಿಂದ 26 ರ ವರೆಗೆ ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಉಚಿತವಾಗಿ ಜೈಪುರ್ ಕೃತಕ ಕಾಲು ಜೋಡಣೆ ಶಿಬಿರ ನಡೆಯಲಿದೆ ಎಂದು ಸಂಸ್ಥೆಯ ಸಾಮಾಜಿಕ ಸೇವಾ ವಿಭಾಗದ ಉಪಾಧ್ಯಕ್ಷ ಎಚ್.ಕೆ.ರಮೇಶ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಈಗಾಗಲೇ ನಗರದಲ್ಲಿ 10 ಬಾರಿ ಈ ಶಿಬಿರ ಆಯೋಜಿಸಲಾಗಿದೆ. ಸುಮಾರು 2,357ಕ್ಕೂ ಹೆಚ್ಚು ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ, 1,155 ಜನರಿಗೆ ಕೃತಕ ಕಾಲು, 709 ಕ್ಯಾಲಿಪರ್ಸ್, 44 ವಾಕರ್, 72 ಕೈ ಗೋಲು, 253 ಜನರಿಗೆ ಊರುಗೋಲು, 38 ಜನರಿಗೆ ಗಾಲಿ ಕುರ್ಚಿಗಳನ್ನು ಮತ್ತು 38 ಜನರಿಗೆ ಕೈಚಾಲಿತ ಸೈಕಲ್ ನೀಡಲಾಗಿದೆ. 48 ಜನರು ಲಘು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದರು.
ಅವಶ್ಯಕವೆನಿಸಿದವರಿಗೆ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುವುದು. ಹುಟ್ಟಿನಿಂದ ಕಾಲಿನ ಅಂಗವಿಕಲತೆ ಹೊಂದಿದವರು, ಪೋಲಿಯೊ ಪೀಡಿತರು, ಆಕಸ್ಮಿಕ ಅಪಘಾತದಿಂದ ಕಾಲು ಕಳೆದುಕೊಂಡವರು, ಕೈ ಕಳೆದುಕೊಂಡವರು ಸೇರಿದಂತೆ ಯಾವುದೇ ರೀತಿಯ ಕಾಲಿನ ಅಂಗವಿಕಲತೆ ಹೊಂದಿದವರು ಈ ಶಿಬಿರದ ಪ್ರಯೋಜನವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಈ ವರ್ಷ 250 ಜನರಿಗೆ ಚಿಕಿತ್ಸೆಗೆ ಅವಕಾಶ ನೀಡಲಾಗುತ್ತದೆ ಎಂದರು.
ಆಸಕ್ತರು ಹೆಸರು ನೋಂದಾಯಿಸಲು ಬಿ.ಎಂ.ನಾಗರಾಜ್ 9902500250, ಎಸ್ ಎಂ ಶಂಭುಲಿAಗಯ್ಯ 9449135837 ಇವರನ್ನು ಸಂಪರ್ಕಿಸಬಹುದಾಗಿದೆ ಎಂದರು. ಮಖಂಡ ಬಿ.ಎಂ.ನಾಗರಾಜ್ ಇದ್ದರು.