ಜಿಲ್ಲೆ

ವಕೀಲನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಮಂಜುನಾಥ

ಹೊಸಪೇಟೆ: ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷರು, ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಹಾಗೂ ಹಿರಿಯ ವಕೀಲ ಸದಾಶಿವ ರೆಡ್ಡಿ ಅವರ ಮೇಲೆ ಅಪರಿಚಿತರಿಂದ ನಡೆದ ಭೀಕರ ಹಲ್ಲೆ ಮತ್ತು ದಾಳಿಯನ್ನು ಖಂಡಿಸಿ ವಕೀಲರ ಸಂಘದಿAದ ಸೋಮವಾರ ಕೆಂಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.

ನಗರದ ಕೋರ್ಟ್ ಆವರಣದಿಂದ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಶೃತಿ ಅವರಿಗೆ ಮನವಿಪತ್ರ ಸಲ್ಲಿಸಿದರು. ವಕೀಲರಿಗೆ ರಕ್ಷಣೆ ನೀಡಬೇಕು ಹಾಗೂ ಬೆಂಗಳೂರಿನಲ್ಲಿ ವಕೀಲರ ಮೇಲೆ ನಡೆದ ಹಲ್ಲೆ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ವಕೀಲರ ಸಂಘದ ಅಧ್ಯಕ್ಷ ಕೆ. ಪ್ರಹ್ಲಾದ್, ವಕೀಲರಾದ ವೀರಭದ್ರಪ್ಪ, ಎಸ್.ವಿ.ಜವಳಿ, ರವಿರಾಜ್, ಕರುಣಾನಿಧಿ, ಕೆ.ವಿ. ಬಸವರಾಜ, ಎಚ್. ಮಹೇಶ, ಮಲ್ಲಿಕಾರ್ಜುನ ಸ್ವಾಮಿ, ಯರಿಸ್ವಾಮಿ, ಟಿ. ಹನುಮಂತಪ್ಪ, ಎಲ್.ಎಸ್. ಆನಂದ, ಕಟಿಗಿ ಜಂಬಯ್ಯ, ಶ್ವೇತಾಂಬರಿ, ಕೃಷ್ಣದೇವರಾಯ ಮತ್ತಿತರರಿದ್ದರು.