ಹೊಸಪೇಟೆ; ಗ್ರಾಮಾಡಳಿತಾಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಕೈಬರಹದ ಮುಖಾಂತರ ಸಾರ್ವಜನಿಕರಿಗೆ ತಲುಪಿಸಲು ವಿಳಂಬವಾಗುವುದನ್ನು ಅರಿತು ತ್ವರಿತ ಸೇವೆ ಒದಗಿಸಲು ಕಂದಾಯ ಇಲಾಖೆಯಿಂದ ಲ್ಯಾಪ್‌ಟಾಪ್ ವಿತರಣೆಗೆ ಮಾಡಲಾಗುತ್ತಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ನಗರದ ತಹಸೀಲ್ ಕಚೇರಿಯಲ್ಲಿ ಶನಿವಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಏರ್ಪಡಿಸಿದ್ದ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮ ಹಾಗೂ ಡಿಜಿಟಲ್ ಅಭಿಲೇಖಾಲಯ ಉದ್ಘಾಟಿಸಿ ಮಾತನಾಡಿದರು.
ಲ್ಯಾಪ್ ಟಾಪ್ ಮೂಲಕ ಆನ್ ಲೈನ್ ಕಡತಗಳನ್ನು ಬೇಗನೇ ಮುಗಿಸಿಕೊಡುವ ನಿಟ್ಟಿನಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಜನರ ಕೆಲಸ ತ್ವರಿತ ಗತಿಯಲ್ಲಿ ಮಾಡಬೇಕು. ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರವೇ ಈ ತಂತ್ರಜ್ಞಾನ ವಸ್ತು ನಿಮಗೆ ನೀಡಿದ್ದು, ಇದರಿಂದ ಬೇಗನೆ ಕೆಲಸವಾಗಬೇ ವಿನಾಃ ನಿರ್ಲಕ್ಷ್ಯ ಸಲ್ಲ. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಭಾವನೆಯಿಂದ ಜನಸಾಮಾನ್ಯರನ್ನು ಅಲೆದಾಡಿಸದೆ ಸೌಜನ್ಯದಿಂದ ಕೆಲಸ ಮಾಡಿಕೊಟ್ಟರೆ ಅವರ ಸಾಮಾನ್ಯರ ಆಶೀರ್ವಾದ ಸದಾ ನಿಮ್ಮನ್ನು ಕಾಯುತ್ತದೆ ಎಂದರು.
ಆಸ್ತಿಯ ಹಳೇ ದಾಖಲೆಗಳು ಆಸ್ತಿದಾರರ ಜೀವನ ಇದ್ದಂತೆ. ದಾಖಲೆಗಳ ಗಣಕೀಕರಣ ಮಾಡುವಾಗ ಜಾಗ್ರತೆ ವಹಿಸಿ, ಲೋಪಗಳು ಉಂಟಾಗದAತೆ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು.
ಗ್ರಾಮೀಣ ಪ್ರದೇಶದ ಜನತೆಗೆ ವಿವಿಧ ಸೇವೆ ಒದಗಿಸಲು ಗ್ರಾಮಾಡಳಿತಾಧಿಕಾರಿಗಳು ಹಾಗೂ ತಹಸೀಲ್ ಕಚೇರಿ ಸಿಬ್ಬಂದಿ ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಜನತೆಯಿಂದ ಕೇಳಿ ಬರುತ್ತಿದೆ. ಸರ್ಕಾರ ಕೊಡುವ ಸಂಬಳಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಒಂದು ವೇಳೆ ಲಂಚ ತೆಗೆದುಕೊಳ್ಳುವುದು ಸಾಬೀತಾದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡ್ರ್, ಗ್ರೇಟ್2 ತಹಸೀಲ್ದಾರ್ ವೆಂಕಟೇಶ್ ಆಶ್ರೀತ್, ಸ್ಥಾನಿಕಾಧಿಕಾರಿಗಳಾದ ಅನೀಲ್, ಅಂದಾನಗೌಡ ಇತರರಿದ್ದರು.