ಜಿಲ್ಲೆ

ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಿ

ಮಂಜುನಾಥ

ಹೊಸಪೇಟೆ: ದೇವನಹಳ್ಳಿ ರೈತರ ಜಮೀನುಗಳನ್ನು ಸ್ವಾಧೀನ ಪ್ರಕ್ರಿಯೆ ಕೈ ಬಿಡಬೇಕು ಎಂದು ಒತ್ತಾಯಿಸಿ ರ‍್ನಾಟ ರಾಜ್ಯ ರೈತ ಸಂಘದಿಂದ ನಗರದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರಗೆ ಗುರುವಾರ ಮನವಿ ಸಲ್ಲಿಸಲಾಯಿತು.

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಭಾಗದ ರೈತರ ಭೂಮಿಯನ್ನು ರ‍್ಕಾರ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿರುವುದು ಖಂಡನೀಯ, ಕೂಡಲೇ ರ‍್ಕಾರ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವುದರ ಮೂಲಕ 1180 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟಕ್ಕೆ ನ್ಯಾಯ ಒದಗಿಸಬೇಕು. ರ‍್ಕಾತ್ ಭೂಮಿಯನ್ನು ದಲಿತರಿಗೆ ನೀಡಿ ರೈತರ ಜೀವನ ಹಸನಾಗಿಸುವಂತೆ ಮಾಡಿದ ರ‍್ಕಾರ ಈಗ ಅದೇ ಭೂಮಿಗಳನ್ನು ಕರ‍್ಪೊರೇಟ್ ಸಂಸ್ಥೆಗಳಿಗೆ ನೀಡಿ ರೈತರನ್ನು ಅದೇ ಕರ‍್ಪೊರೇಟ್ ಸಂಸ್ಥೆಗಳ ಮುಂದೆ ಸೆಕ್ಯೂರಿಟಿ ಗರ‍್ಡ್ಗಳಾಗಿ ಮಾಡುವ ಹುನ್ನಾರ ರ‍್ಕಾರ ಮಾಡುತ್ತಿದೆ. ರ‍್ಕಾರ ಕೂಡಲೇ ಭೂಸ್ವಾಧೀನವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಭೂಸ್ವಾಧೀನ ಕೈ ಬಿಡುವವರೆಗೆ ರ‍್ಕಾರದ ವಿರುದ್ಧ ಹೋರಾಟ ಮಾಡುತ್ತಿರುವ ರೈತರಿಗೆ ಬೆಂಬಲವಾಗಿ ನಾವು ಇರುತ್ತೇವೆ. ದೇವನಹಳ್ಳಿಯಲ್ಲಿ ಹಾದು ಹೋಗಿರುವ ರಾಷ್ಟೀಯ ಹೆದ್ದಾರಿ ಅಕ್ಕ ಪಕ್ಕದಲ್ಲಿ ಬಹಳಷ್ಟು ಗುಟ್ಟಗಾಡು ಪ್ರದೇಶವಿದ್ದು ಕೃಷಿಗೆ ಯೋಗ್ಯವಲ್ಲದ ಜಮೀನು ಬೇಕಾದಷ್ಟಿದೆ. ಆ ಜಾಗದಲ್ಲಿ ಕರ‍್ಪೊರೇಟ್ ಸಂಸ್ಥೆಗಳಿಗೆ ರ‍್ಕಾರ ಜಾಗ ನೀಡಲಿ ಎಂದು ಒತ್ತಾಯಿಸಿದರು.

ಪ್ರಮುಖರಾದ ಗಂಟೆ ಸೋಮಶೇಖರ, ಎಂ.ಜಂಬಯ್ಯ ನಾಯಕ, ಬಿಸಾಟಿ ತಾಯಪ್ಪ, ಭಾಸ್ಕರ್ ರೆಡ್ಡಿ, ವಿ.ಸ್ವಾಮಿ, ಬಿಸಾಟಿ ಮಹೇಶ್, ಯಲ್ಲಲಿಂಗ ಇತರರಿದ್ದರು.