ಹೊಸಪೇಟೆ: ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ನಿಮಿತ್ತ ಪೌರ ಕಾರ್ಮಿಕರನ್ನು ಸತ್ಕರಿಸುವ ವಿಶೇಷ ಇಂಟಗ್ರೇಟೆಡ್ ಅಡ್ವಾನ್ಸ್ಡ್ ಯೋಗ ತರಬೇತಿ ಶಿಬಿರ ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡಯಿತು.
ಹರಿದ್ವಾರದ ಯೋಗ ಗುರುಸ್ವಾಮಿ ದೇವ್‌ಜೀ ಪರಮಾರ್ಥ ದೇವ್‌ಜೀ ಶಿಬಿರ ಉದ್ಘಾಟಿಸಿದರು. ಬಳಿಕ ಪೌರ ಕಾರ್ಮಿಕರಿಗೆ ರುದ್ರಾಕ್ಷಿ ಮಾಲೆ ಸನ್ಮಾನಿಸಿದರು. ನಂತರ ನಗರ, ಊರಿನ ಸ್ವಚ್ಛತೆಗೆ ಪೌರ ಕಾರ್ಮಿಕರು ಬೇಕು, ನಮ್ಮ ದೇಹದೊಳಗಿನ ಶುದ್ಧಿಗೆ ಯೋಗ ಬೇಕು. ನಮ್ಮ ಅಹಾರ ಕ್ರಮದಲ್ಲೇ ನಮ್ಮ ಆರೋಗ್ಯ ಅಡಗಿದೆ, ಮಿತಾಹಾರದಿಂದ ಉತ್ತಮ ಆರೋಗ್ಯ ಕಾಪಾಡಬಹುದು ಎಂದರು.
ಸೇಕ್ರೆಡ್ ಹಾರ್ಟ್ ಕೆಥೋಲಿಕ್ ಚರ್ಚ್ನ ಧರ್ಮಗುರು ಫಾದರ್ ಭಗವಂತ್ ರಾಜ್, ಹಂಸಾAಬಾ ಶಾರದಾಶ್ರಮದ ಮಾತಾಜಿ ಪ್ರಬೋದಮಯಿ, ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ, ವಿಜಯನಗರ ಜಿಲ್ಲಾ ಪ್ರಭಾರಿ ಡಾ.ಎಸ್.ಬಿ.ಹಂದ್ರಾಳ ಪ್ರಮುಖರಾದ ಬಾಲಚಂದ್ರ ಶರ್ಮಾ, ಕಿರಣ್ ಕುಮಾರ, ಕಿರಣ ಮನೋಲಕರ್ ಸಂಜಯ ಕುಸ್ತಿಗಾರ, ಮಂಗಳಮ್ಮ, ಡಾ.ಸುಮಂಗಲಾದೇವಿ, ಪ್ರಮೀಳಮ್ಮ, ಗೌರಮ್ಮ ಇತರರಿದ್ದರು.