ಜಿಲ್ಲೆ

ಕೆಎಸ್‌ಆರ್‌ಟಿಸಿ ನಾಲ್ಕು ಸಿಬ್ಬಂದಿ ವಿರುದ್ಧ ಎಫ್‌ಐಆರ್

ಮಂಜುನಾಥ

ಹೊಸಪೇಟೆ: ನಗರದ ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿ ಇತ್ತೀಚೆಗೆ ಕಸದ ಹೆಸರಿನಲ್ಲಿ ಗುಜರಿ ಸಾಮಗ್ರಿಗಳನ್ನು ಸಾಗಿಸಲಾಗಿರ ಬಹುದು ಎಂಬ ಆರೋಪದ ಹಿನ್ನೆಲೆಯಲ್ಲಿ ಘಟಕ ವ್ಯವಸ್ಥಾಪಕ ಸೇರಿದಂತೆ ನಾಲ್ಕು ಜನ ಸಿಬಂದಿ ವಿರುದ್ಧ ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ವಿಭಾಗೀಯ ಭದ್ರತಾ ನಿರೀಕ್ಷಕರಾಗಿದ್ದ ಜಿ.ರವಿ, ಸಹಾಯಕ ಉಗ್ರಾಣಾಧಿಕಾರಿಯಾಗಿದ್ದ ತಂಬ್ರಹಳ್ಳಿ ಅಂಗರಾಜು, ಕರಾಸಾ ಹವಿಲ್ದಾರ್ ಇಬ್ರಾಹಿಂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 0000 ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟಕದಲ್ಲಿ ಜೂ.04 ಹಾಗೂ ಜೂ.05ರಂದು 06 ಭಾರಿ ಲಾರಿಗಳಲ್ಲಿ ಟೆಂಡರ್ ಕರೆಯದೇ, ಯಾರಿಗೂ ಮಾಹಿತಿ ಇಲ್ಲದೇ ಕಸ ಎಂದು ವಿಲೇವಾರಿ ಮಾಡಿದ್ದಾರೆ. ಇದರಲ್ಲಿ ಸಂಶಯ ಕಂಡ ಹಿನ್ನೆಲೆಯಲ್ಲಿ ಕಲಬುರಗಿಯ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ  ಅಮಾನತ್ತು ಕೂಡ ಮಾಡಿದ್ದರು.