ಹೊಸಪೇಟೆ: ಪ್ರತಿ ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ, ಪ್ರತಿ 15 ದಿನಕ್ಕೊಮ್ಮೆ ಅಭಿವೃದ್ಧಿ ಕೆಲಸ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಧರ್ಮಸಿಂಗ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸರ್ಕಾರದಿಂದ ಹೆಚ್ಚಿನ ಅನುದಾನ ಬರುತ್ತಿದೆ. ಇತಿಹಾಸದಲ್ಲಿ ಮೊದಲು ಬಾರಿ ನಮ್ಮ ಮುಖ್ಯಮಂತ್ರಿಗಳು ಕೆಕೆಆರ್‌ಡಿಬಿಗೆ 5 ಸಾವಿರ ಕೋಟಿ ಅನುದಾನ ಮೀಸಲು ಇರಿಸಿದ್ದಾರೆ. ಈ ವರ್ಷ ಜಿಲ್ಲೆಗೆ 348 ಕೋಟಿ ಮೈಕ್ರೋ ಯೋಜನೆಯಡಿ ಬಂದಿದೆ ಎಂದರು.
ಈ ಭಾಗಕ್ಕೆ 371 ಜೆ ಮಾಡಲು ಬಿಜೆಪಿ ಅಡ್ಡಗಾಲು ಹಾಕಿದರು. ಆದರೆ, ಅಂದಿನ ಪ್ರದಾನಿ ಮನಮೋಹನ್ ಸಿಂಗ್ ಮತ್ತುವ ಸೋನಿಯಾ ಗಾಂಧಿಗೆ ನೆನೆಯುವುದು ಸೂಕ್ತ. ಕಳೆದ ಹತ್ತು ವರ್ಷದಲ್ಲಿ ಕಕ ಭಾಗಕ್ಕೆ 20 ಸಾವಿರ ಕೋಟಿ ಬಿಡುಗಡಯಾಗಿದೆ. ಹಣ ಖರ್ಚು ಮಾಡಲ್ಲ ಎಂಬ ಅಪವಾದ ನಮ್ಮ ಮೇಲಿದೆ. ಈ ವರ್ಷ ಈಗಾಗಲೇ 1 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ವಿಶೇಷ ಸಚಿವಾಲಯ ಬೇಕು ಅಂತ ಕೇಳುತ್ತಿದ್ದೇವೆ. ಅಕ್ಷರ, ಅರೋಗ್ಯ ಅವಿಷ್ಕಾರ ಯೋಜನೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಶಿಕ್ಷಣಕ್ಕೆ 2 ಸಾವಿರ ಕೋಟಿ, ಆರೋಗ್ಯಕ್ಕೆ 857 ಕೋಟಿ ರೂ ಅನುದಾನ ನೀಡಲಾಗಿದೆ. ಉದ್ಯೋಗಕ್ಕಾಗಿ 1.25 ಲಕ್ಷ ಯುವಕರಿಗೆ ಪ್ರೋತ್ಸಾಹ ಧನ, 25 ಸಾವಿರ ಮಕ್ಕಳಿಗೆ ಪೈಲಟ್ ಪ್ರಾಜೆಕ್ಟ್ ಸೆಡಾಕ್ ಕೌಶಲ್ಯ ಉದ್ಯಮ ನೀಡಲಾಗಿದೆ ಎಂದರು.
ಅಲ್ಪಸAಖ್ಯಾತರ ಕಲ್ಯಾಣಕ್ಕೆ ಆದ್ಯತೆ. ಮೌಲಾನಾ ಅಜಾದ್ ಸೇರಿ ಶಾಲೆಗಳು ಸೇರಿದಂತೆ ಹಿಂದುಳಿದ, ಎಸ್ಸಿ, ಎಸ್ಟಿ ಸಮುದಾಯಗಳಿಗೆ 204 ಕೋಟಿ ರೂ. ಅನುದಾನ ನೀಡಲಾಗುದೆ. ನಮ್ಮ ಭಾಗದಲ್ಲಿ 2018 ರಲ್ಲಿ 16 ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅರ್ಧ ಅನುದಾನ ನೀಡಿದೆ. ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ರೈತರ ಹಿತಕ್ಕಾಗಿ 40 ತಾಲೂಕುಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುತ್ತದೆ.
ಕೇಂದ್ರ ಸರ್ಕಾರದಿಂದ ಬಹಳ ಅನ್ಯಾಯವಾಗುತ್ತಿದೆ. ಸರಿಯಾಗಿ ನಮಗೆ ಅನುದಾನ ಬಂದಿಲ್ಲ. ಕೇಂದ್ರದ 48 ಲಕ್ಷ ಕೋಟಿ ಬಜೆಟ್ ಇದೆ. 5 ಸಾವಿರ ಕೋಟಿ ಕೊಡಬೇಕು. ಅಭಿವೃದ್ದಿಗೆ ಅನುಕೂಲ ಆಗುತ್ತೆ. ರಾಜ್ಯಕ್ಕೆ ಹಾಗೂ ಕಕಗೆ ಮಲತಾಯಿ ಧೋರಣೆ ಮಾಡುತ್ತಿದೆ. ಪಕ್ಷ ಬೇಧ ಭಾವ ಬಿಟ್ಟು ಅಭಿವೃದ್ದಿಗೆ ಮುಂದಾಗಬೇಕು ಎಂದರು.