ಜಿಲ್ಲೆ

ಕೆಎಎಸ್ ಪೂರ್ವಭಾವಿ ಪರೀಕ್ಷೆ ಸುಸೂತ್ರ

ಮಂಜುನಾಥ

ಹೊಸಪೇಟೆ: ನಗರದ 13 ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಯಿತು.

ಒಟ್ಟು 5023 ಪರೀಕ್ಷಾರ್ಥಿಗಳಲ್ಲಿ ಮೊದಲ ಪತ್ರಿಕೆಗೆ 2855 ಅಭ್ಯರ್ಥಿಗಳು ಹಾಜರಾಗಿ, 2168 ಅಭ್ಯರ್ಥಿಗಳು ಗೈರು ಹಾಜರಾದರೆ, ಎರಡನೇ ಪತ್ರಿಕೆಗೆ 2742 ಪರೀಕ್ಷಾರ್ಥಿಗಳು ಹಾಜರಾಗಿ, 2281 ಪರೀಕ್ಷಾರ್ಥಿಗಳು ಗೈರು ಹಾಜರಾಗಿದ್ದರು.

ನಗರದ 13 ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸರು ತಪಾಸಣೆ ನಡೆಸಿ, ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳನ್ನು ಕಳುಹಿಸಿದರು. ಎಲ್ಲಾ ಕೇಂದ್ರಗಳಲ್ಲಿ ಸುಸೂತ್ರವಾಗಿ ಪರೀಕ್ಷೆ ನಡೆಯಿತು. ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.