ಜಿಲ್ಲೆ

ಸಿಎಂ ಗೌರವಯುತವಾಗಿ ರಾಜೀನಾಮೆ ನೀಡಲಿ

ಮಂಜುನಾಥ

ಹೊಸಪೇಟೆ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಂದಾಗಿನಿAದ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ದೂರಿದರು.

ನಗರದ ರಾಣಿಪೇಟೆಯಲ್ಲಿ ಭಾನುವಾರ ಬಿಜೆಪಿ ಸಂಸ್ಥಾಪನಾ ದಿನ ಮತ್ತು ರಾಮನವಮಿ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಆಡಳಿತ, ಕಾನೂನು ಸುವ್ಯವಸ್ಥೆ ಸರಿ ಇಲ್ಲ, ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹೆಚ್ಚಾಗಿದೆ. ಇವರ ಕಿರುಕುಳಕ್ಕೆ ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ವಿಧಾನಸಭೆಯಲ್ಲಿ 75 ವರ್ಷದ ಇತಿಹಾಸದಲ್ಲಿ ನಾಚಿಕೆಯಾಗುವಂತಹ ಸಂಗತಿಗಳು ಚರ್ಚೆಯಾದವು. ಹನಿಟ್ರಾö್ಯಪ್, ಸಿಡಿ, ಪೆನ್‌ಡ್ರೆöÊವ್ ಇಂತಹ ವಿಚಾರಗಳು ಚರ್ಚೆಯಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವಯುತವಾಗಿ ರಾಜೀನಾಮೆ ಕೊಟ್ಟು ಜನರ ಕ್ಷಮೆ ಕೇಳಬೇಕಾಗಿತ್ತು. ಆದರೆ, ಅಧಿಕಾರದ ಆಸೆಗೆ ಕುರ್ಚಿಗೆ ಅಂಟಿಕೊAಡು ಕೂತಿದ್ದಾರೆ ಎಂದರು.

ವಿನಯ್ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಕಾರ್ಯಕರ್ತ ಎನ್ನುವ ಕಾರಣಕ್ಕೆ ಇಬ್ಬರು ಶಾಸಕರು ದೌರ್ಜನ್ಯ ಮಾಡಿದ್ದಾರೆಂದು ಪತ್ರದಲ್ಲಿ ಬರೆದಿಟ್ಟಿದ್ದಾರೆ. ಅದರ ಪ್ರಕಾರ ಇಬ್ಬರು ಶಾಸಕರು ಆರೋಪಿಗಳು. ಅವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಮಾಡಿ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಲೆ ಏರಿಕೆ ಪ್ರತಿಭಟನೆಯಲ್ಲಿ ಜೆಡಿಎಸ್ ಅಂತರ ಕಾಯ್ದುಕೊಂಡಿಲ್ಲ. ಅವರೂ ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಈಗಾಗಲೇ ಈ ಕುರಿತು ಹೇಳಿಕೆ ನೀಡಿದ್ದಾರೆ ಎಂದರು.

ವಿಶ್ವದ ದೊಡ್ಡ ಪಕ್ಷ: ಬಿಜೆಪಿ ದೇಶದಲ್ಲಿ ಅತಿ ಚಿಕ್ಕ ಪಕ್ಷವಾಗಿ ಸಂಘಟನೆಗೊAಡು ಈಗ ವಿಶ್ವದ ಏಕೈಕ ದೊಡ್ಡ ಪಕ್ಷವಾಗಿ ಬೆಳೆದಿದೆ. ಪಕ್ಷ ಕಟ್ಟಿ ಬೆಳೆಸಿದವರಲ್ಲಿ ಎಲ್.ಕೆ.ಅಡ್ವಾಣಿ, ವಾಜಪೇಯಿ, ಪ್ರಧಾನಿ ಮೋದಿ ದೇಶದ ಎಲ್ಲ ರಾಜ್ಯಗಳಲ್ಲಿ ಪಕ್ಷ, ಸಂಘದ ಪ್ರಮುಖರ ಶ್ರಮದಿಂದ ಬಿಜೆಪಿ ಪ್ರಪಂಚದ ಏಕೈಕ ದೊಡ್ಡ ಪಕ್ಷವಾಗಿದ್ದು, 12 ಕೋಟಿ ಜನ ಸದಸ್ಯರಿದ್ದಾರೆ ಎಂದರು.

ಬಿಜೆಪಿಗೆ ಕೀರ್ತಿ ಶ್ರೇಯಸ್ಸು ತಂದವರು ನಮ್ಮ ನಾಯಕರು. ಸಂಸ್ಥಾಪನಾ ದಿನವನ್ನು ಹಬ್ಬದ ರೀತಿ ದೇಗುಲಗಳಲ್ಲಿ ಪೂಜೆ ಮಾಡಿ ಆಚರಿಸುತ್ತಿದ್ದಾರೆ. ಯಾವುದೇ ಪಕ್ಷಗಳು ಬಿಜೆಪಿಗೆ ಸರಿಸಾಟಿಯಾಗದಂತೆ ಜನರು ಆಶೀರ್ವದಿಸಿದ್ದಾರೆ ಎಂದರು.

ಕೇAದ್ರ ಮಾಜಿ ಸಚಿವ ನಾರಾಯಣಸ್ವಾಮಿ, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಶಂಕರಮೇಟಿ ಇತರರಿದ್ದರು.