ಜಿಲ್ಲೆ

ನಾಳೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ

ಹೊಸಪೇಟೆ: ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಜು.24 ರ ಬೆಳಿಗ್ಗೆ 11ಕ್ಕೆ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ದ ಜಾಗೃತಿ ಕಾರ್ಯಕ್ರಮ ನಡೆಯಲಿದೆ.

ಎಸ್‌ಪಿ ಬಿಎಲ್.ಶ್ರೀಹರಿಬಾಬು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ದುರುಪಯೋಗ, ಅಕ್ರಮ ಸಾಗಾಣಿಕೆ ವಿರುದ್ದ ಜಾಗೃತಿ, 18 ವರ್ಷದೊಳಗಿನ ಮಕ್ಕಳು ದ್ವಿ ಚಕ್ರ ವಾಹನಗಳನ್ನು ಚಾಲನೆ ಮಾಡುವುದರ ಬಗ್ಗೆ, ಪೋಕ್ಸೋ ಕಾಯ್ದೆ 2012 ರ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಡಿವೈಎಸ್‌ಪಿ ಮಂಜುನಾಥ, ಸಿಪಿಐ ಲಖನ್ ಅರ್.ಮಸಗುಪ್ಪಿ ಇತರರು ಭಾಗವಹಿಸಲಿದದ್ದಾರೆ ಎಂದು ಪಿಎಸ್‌ಐ ಬಸವರಾಜ್ ತಿಳಿಸಿದರು.