ಜಿಲ್ಲೆ

ಕಮಲಾಪುರ ಪ.ಪಂ.ಗೆ ಅಧ್ಯಕ್ಷ-ಉಪಾಧ್ಯಕ್ಷ ಅವಿರೋಧ

ಮಂಜುನಾಥ

ಹೊಸಪೇಟೆ: ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ 17ನೇ ವಾರ್ಡ್ನ ಸದಸ್ಯೆ ಅಮೀನಾ ಹಾಗೂ ಉಪಾಧ್ಯಕ್ಷರಾಗಿ 4ನೇ ವಾರ್ಡ್ನ ಸದಸ್ಯ ಎಚ್.ಗೋಪಾಲಕೃಷ್ಣ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ತಹಸೀಲ್ದಾರ್ ಶೃತಿ ಎಂ.ಮಳ್ಳನಗೌಡ್ರ ಬುಧವಾರ ಘೋಷಣೆ ಮಾಡಿದರು.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಪಟ್ಟಣ ಪಂಚಾಯಿತಿ 20 ಸದಸ್ಯರ ಬಲ ಹೊಂದಿದ್ದು ಇದರಲ್ಲಿ 14 ಕಾಂಗ್ರೆಸ್, 5 ಪಕ್ಷೇತರ, ಒಬ್ಬ ಬಿಜೆಪಿ ಸದಸ್ಯರಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ನಿಗದಿತ ಸಮಯದೊಳಗೆ ಇಬ್ಬರೇ ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಎಂದು ಹೆಸರು ಘೋಷಣೆ ಮಾಡಿದರು. ಹಾಗೂ 12ನೇ ವಾರ್ಡ್ನ ಸದಸ್ಯ ಅಜಯ್ ಕುಮಾರ್ ಸ್ಥಾಯಿ ಸಮಿತಿ ಅಧ್ಯಕ್ಷಯಾಗಿ ಆಯ್ಕೆಯಾಗಿದ್ದಾರೆ.

ತಪ್ಪಿದ ಜಾತಿ ಲೆಕ್ಕಾಚಾರ

ಕಳೆದ 10 ವರ್ಷದಲ್ಲಿ ಮುಸ್ಲಿಮ್ ಸಮುದಾಯದಿಂದ ಆಡಳಿತ ಚುಕ್ಕಾಣಿ ಹಿಡಿದ್ದಿದ್ದಾರೆ. ಆದ್ದರಿಂದ ಈ ಭಾರಿ ಸಾಮಾನ್ಯ ಮಹಿಳೆಗೆ ಮೀಸಲಾತಿ ಇರುವುದರಿಂದ ಆಕಾಂಕ್ಷಿಗಳು ಜಾತಿ ಲೆಕ್ಕಾಚಾರದಲ್ಲಿದ್ದಾರೆ. ಎಸ್ಸಿ ಸಮುದಾಯಕ್ಕೆ ಮೀಸಲಾಯಿತಿ ಪ್ರಕಟದಲ್ಲಿ ಅನ್ಯಾಯ ಆಗಿದೆ. ಆದ್ದರಿಂದ ಸಾಮಾನ್ಯ ಮೀಸಲಾಯಿತಿಯಲ್ಲಿ ಎಸ್ಸಿ ಸಮುದಾಯಕ್ಕೆ ನೀಡಬೇಕು ಎಂದು ಕೆ.ವಿ.ಸರಿತಾ ಸೇರಿದಂತೆ ಹಲರು ಆಕಾಂಕ್ಷಿಗಳಾಗಿದ್ದರು. ಇನ್ನೂ ಪಟ್ಟಣದಲ್ಲಿ 6 ಎಸ್ಸಿ, 6 ಎಸ್ಟಿ ಸಮುದಾಯದ ಸದಸ್ಯರಿದ್ದರೆ, 5 ಜನ ಮುಸ್ಲಿಮ್ ಸಮುದಾಯ ಹಾಗೂ 3 ಜನ ಇತರೆ ಜನಾಂಗದ ಸದಸ್ಯರು ಇದ್ದಾರೆ. ಮಂಗಳವಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನೇತೃತ್ವದಲ್ಲಿ ನಡೆದಿದ ಸಭೆಯಲ್ಲಿ ಎಲ್ಲಾವೂ ತಲೆಕೇಳಗಾಗಿದೆ. ಜಾತಿ ಲೆಕ್ಕಾಚಾರ ಮಾಡಿದ ಸದಸ್ಯರ ಸಂಕಲ್ಪ ವಿಫಲವಾಗಿದೆ.