ಹೊಸಪೇಟೆ: ಹಿರಿಯ ನಾಗರಿಕರು ಅಪಾರ ಅನುಭವ ಹೊಂದಿದ ಜ್ಞಾನ ಬಂಡಾರವಿದ್ದಂತೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಮಾನ ಎ.ನಂದಗಡಿ ಹೇಳಿದರು.
ಇಲ್ಲಿನ ನಗರಸಭೆಯಲ್ಲಿ ಮಂಗಳವಾರ ಹಮ್ಮಿಕೊಂಡ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ದೇಶವು ಸಂಸ್ಕೃತಿಯ ತವರೂರು. ಭಾರತದ ನಾಗರಿಕರು ಹಿರಿಯರಿಗೆ ದೇವರ ಸ್ಥಾನವನ್ನು ನೀಡಿ ಗೌರವಿಸುತ್ತಾರೆ. ಹಿರಿಯ ನಾಗರಿಕರು ತಮ್ಮ ಅನುಭವಗಳನ್ನು ಯುವ ಜನತೆಗೆ ಧಾರೆಯರಿದು, ಯುವ ಜನೆತೆಯ ಯಶಸ್ಸಿಗೆ ಪಾತ್ರರಾಗುತ್ತಿದ್ದಾರೆ. ಪ್ರಸ್ತುತ ಯುವಕರಿಗೆ ಉತ್ಸಹ ಕಡಿಮೆಯಿದೆ. ಹಿರಿಯರು ಪಾಲಿಸುತ್ತಿದ್ದ ಜೀವನ ಶೈಲಿಯಲನ್ನು ಯುವಕರು ಅಳವಡಿಸಿಕೊಂಡರೆ ಯಶಸ್ಸು ಕಂಡಿತ. ಜೀವದಲ್ಲಿ ಏನಾದರು ಸಾಧನೆ ಮಾಡಬೇಕಾದರೆ ಹಿರಿಯರ ಆಶೀರ್ವಾದವಿರಬೇಕು. ಇನ್ನೂ ಹಿರಿಯ ನಾಗರಿಕರಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ನರಸಭೆಯ ಪೌರಾಯುಕ್ತ ಸಿಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಯಾಧೀಶರಾ ಪ್ರಶಾಂತ್ ನಾಗಲಾಪುರ್, ಹೇಮಲತಾ ಬಿ.ಹುಲ್ಲೂರ, ಬಿ.ಎನ್.ರಮೇಶ್ ಬಾಬು, ಆರ್.ಎಚ್.ಅಶೋಕ, ಜಿ.ಸಂಜಿವ್ ಕುಮಾರ, ಜೆ.ಚೈತ್ರ, ವಕೀಲರ ಸಂಘದ ಅಧ್ಯಕ್ಷ ಕೆ.ಪ್ರಹ್ಲಾದ್ ಇತರರಿದ್ದರು.