ಹೊಸಪೇಟೆ: ಹಗಲಿರುಳು ಸಮಾಜದ ಏಳುಬೀಳು-ಏಳ್ಗೆಯ ಬಗ್ಗೆ ಬೆಳಕು ಚೆಲ್ಲುವ ಪತ್ರಕರ್ತರು ಅನೇಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಹೇಳಿದರು.
ಪತ್ರಿಕಾ ದಿನಾಚರಣೆ ನಿಮಿತ್ತ ನಗರದ ಫ್ರೀಡಂ ಪಾರ್ಕಿನಲ್ಲಿ ಭಾನುವಾರ ಪತ್ರಕರ್ತರ ಕುಟುಂಬದ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜಕ್ಕೆ ವಸ್ತು ನಿಷ್ಠೆಯನ್ನು ಚೆಲ್ಲುವ ನೇರ ನಿಷ್ಠುರ ಪತ್ರಕರ್ತರಿಂದ ಸಾಮಾಜಿಕ ಜನ ಜೀವನ ಬದಲಾವಣೆ ಕಾಣುತ್ತಿದೆ. ಆದರೆ ತಮ್ಮ ಕುಟುಂಬಗಳ ನಿರ್ವಹಣೆಯಲ್ಲಿ ಎಡವುತ್ತಿದ್ದಾರೆ. ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವಂತೆ ಪತ್ರಕರ್ತರು ಬದಕುತ್ತಿದ್ದಾರೆ. ಕುಟುಂಬದ ಜತೆ ಕಾಲ ಕಳೆಯುವುದೇ ಅಪರೂಪ. ಪತ್ರಕರ್ತರು ತಮ್ಮ ಆರೋಗ್ಯದ ಜತೆ ಕುಟುಂಬದ ಗಮನ ಹರಿಸಬೇಕು ಎಂದರು.
ರಾಜ್ಯ ಸಮಿತಿ ಸದಸ್ಯ ವೆಂಕೋಬ ಪೂಜಾರ್ ಮಾತನಾಡಿ, ಸಮಾಜದ ಆರೋಗ್ಯ ಕಾಪಾಡಲು ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಮತ್ತು ಅವರ ಕುಟುಂಬದ ಸಂತೋಷಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪರಸ್ಪರ ಮಾನವೀಯ ಸಂಬAಧಗಳನ್ನು ಭದ್ರಗೊಳಿಸುವಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಸಹಕಾರಿಯಾಗುತ್ತದೆ ಎಂದರು. ಬಳಿಕ ಪತ್ರಕರ್ತರು ಹಾಗೂ ಅವರ ಕುಟುಂಬಸ್ಥರಿAದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದ ಬಳಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಸುದ್ದಿಗಾರರಾದ ಕೃಷ್ಣ ಎನ್.ಲಮಾಣಿ, ಬಾಲಕೃಷ್ಣ, ಕುಮಾರ್, ಅನಂತ ಜೋಶಿ, ವೆಂಕಟೇಶ, ಸಿ.ಕೆ.ನಾಗರಾಜ್, ಮನೋಹರ್ ಬೊಂದಾಡೆ, ರೇಖಾ ಪ್ರಕಾಶ್, ಪೂರ್ಣಿಮಾ, ಇಂದಿರಾ ಸೇರಿದಂತೆ ಇತರೆ ಪತ್ರಕರ್ತರ ಕುಟುಂಬದ ಸದಸ್ಯರು ಇದ್ದರು.