ಹೊಸಪೇಟೆ: ನಗರದಲ್ಲಿ ಮಾ.22ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, 60ಕ್ಕೂ ಅಧಿಕ ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ವಿಜಯನಗರ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಜಿಲ್ಲಾಧ್ಯಕ್ಷ ಅಶ್ವಿನ್ ಕೊತ್ತಂಬರಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಂಘದ ಜತೆಗೆ ವಿಜಯನಗರ ಕಾಲೇಜ್ ಹಾಗೂ ರೈಟ್‌ವೇ ಸೊಲೂಷನ್ಸ್ನಿಂದ ನಗರದ ವಿಜಯನಗರ ಕಾಲೇಜ್ ಆವರಣದಲ್ಲಿ ಮಾ.22ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಇದೇ ಮೊದಲ ಬಾರಿಗೆ ಇಂತಹ ಉದ್ಯೋಗ ಮೇಳ ನಡೆಯುತ್ತಿದೆ. ಈಗಾಗಲೇ ಅವಿಭಜಿತ ಬಳ್ಳಾರಿ ಜಿಲ್ಲೆಯಿಂದ 3 ಸಾವಿರ ಆಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 60 ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ ಎಂದರು.
ಇಲ್ಲಿನ ಯುವಜನತೆಗೆ ಸ್ಥಳಿಯವಾಗಿ ಉದ್ಯೋಗ ಸಿಗಬೇಕೆಂಬ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. ಕೈಗಾರಿಕೆಗಳು , ಪ್ಲಾಂಟ್ಸ್ , ಬಟ್ಟೆ ಅಂಗಡಿ ಕೋಪರೇಟಿವ್ ಬ್ಯಾಂಕ್ ಗಳು, ವ್ಯಾಪಾರಸ್ಥರು ಸೇರಿ ಅನೇಕರು ಪಾಲ್ಗೊಳ್ಳುವರು. ಶಾಸಕ ಎಚ್.ಆರ್.ಗವಿಯಪ್ಪ ಉದ್ಘಾಟಿಸಲಿದ್ದು, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಪಾಲ್ಗೊಳ್ಳುವರು. ಆಯ್ಕೆಯಾದವರಿಗೆ ಸಂಜೆ ನಡೆಯುವ ಸಮಾರೋಪದಲ್ಲಿ ಸಂಜೆ ನಡೆಯುವ ಸಮಾರೋಪಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮತ್ತು ಎಸ್ಪಿ ಡಾ. ಬಿ.ಎಲ್.ಶ್ರೀಹರಿಬಾಬು ಆಗಮಿಸಲಿದ್ದಾರೆ. ನೇಮಕಾತಿ ಪತ್ರ ನೀಡಲಾಗುತ್ತದೆ ಎಂದರು.
ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಮೆಟ್ರಿ, ಪ್ರಾಚಾರ್ಯ ಡಾ.ಎಂ. ಪ್ರಭುಗೌಡ, ಕಾರ್ಯದರ್ಶಿ ಕಾಕುಬಾಳು ರಾಜೇಂದ್ರ, ಕೆ.ಎಸ್.ಮಂಜುನಾಥ ಕಿರಣ್ ಕುಮಾರ್ ಇದ್ದರು.