ಜಿಲ್ಲೆ

ಜೆಸ್ಕಾಂ ಸಂವಾದ ಸಭೆ ಡಿ.21ಕ್ಕೆ

ಮಂಜುನಾಥ

ಹೊಸಪೇಟೆ: ತಾಲೂಕಿಲ ಗ್ರಾಮೀಣ ಉಪವಿಭಾಗದ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆಯನ್ನು ಡಿ.21 ರಂದು ಏರ್ಪಡಿಸಲಾಗಿದೆ ಎಂದು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ತಾಲೂಕಿನ ವಿದ್ಯುತ್‌ಗ್ರಾಹಕರು (ನಗರ ಹೊರತುಪಡಿಸಿ) ಸಭೆಗೆ ಭಾಗವಹಿಸಿ ವಿದ್ಯುತ್ ಸಮಸ್ಯೆ ಇದ್ದಲ್ಲಿ ಅಹವಾಲುಗಳನ್ನು ಸಲ್ಲಿಸಿ ಪರಿಹರಿಸಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.