ಜೆನ್ನಿ ಕತ್ತೆಗಳ 
ಜಿಲ್ಲೆ

ಜೆನ್ನಿ ಮಿಲ್ಕ್ ಕತ್ತೆಗಳ ಹರಾಜು

ಹೊಸಪೇಟೆ: ಕಂಪನಿ ಬಹುಕೋಟಿ ಜೆನ್ನಿ ಮಿಲ್ಕ್ ವಂಚನೆ ಪ್ರಕರಣ ಸಿಐಡಿಗೆ ವಹಿಸಲಾಗಿದೆ. ಆದರೆ ಕಂಪನಿಯವರ ಬಳಿ ಉಳಿದುಕೊಂಡಿದ್ದ ಕತ್ತೆಗಳ ನಿರ್ವಹಣೆ ದೊಡ್ಡ ಸವಾಲಾಗಿದೆ. ಆದ್ದರಿಂದ ಎಲ್ಲ ಕತ್ತೆಗಳನ್ನು ಮಾರಾಟ ಮಾಡಲು ಹರಾಜು ಕರೆಯಲಾಗಿದೆ.

ಜೆನ್ನಿ ಮಿಲ್ಕ ಕಂಪನಿಯಿAದ ರೈತರಿಗೆ ವಂಚನೆ ಆಗಿದೆ ಎಂದು ಪಟ್ಟಣ ಠಾಣೆ ಪೊಲೀಸರು ಸೆ.19ರಂದು ಪ್ರಕರಣ ದಾಖಲಿಸಿದರು. ಐವರನ್ನು ಕೂಡ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ಜಿನ್ನಿ ಮಿಲ್ಕ್ ವಂಚನೆ ಪ್ರಕರಣವನ್ನು ಸಿಐಡಿ ಡಿವೈಎಸ್‌ಪಿ ಅಸ್ಲಾಂ ಪಾಷಾ ನೇತೃತ್ವದ ತಂಡ ತನಿಖೆ ಮುಂದುವರಿಸಿದೆ. ಪ್ರಕರಣದ ನಂತರ ಜಪ್ತಿ ಮಾಡಲಾದ ಕತ್ತೆಗಳ ನಿರ್ವಹಣೆ ಅಧಿಕಾರಿಗಳಿಗೆ ತಲೆನೋವಾಗಿತ್ತು. ಆಹಾರ, ನಿರ್ವಹಣೆಯಿಲ್ಲದೇ ಕೆಲ ಕತ್ತೆಗಳು ಮೃತಪಟ್ಟಿವೆ. ಇನ್ನೂ ಇದನ್ನು ಹೀಗೆ ಬಿಟರೆ ಎಲ್ಲಾ ಕತ್ತೆಗಳು ಸತ್ತು ಹೋಗುತ್ತವೆ ಎಂದು ನ್ಯಾಯಾಲಯದ ಅನುಮತಿ ಪಡೆದು ಮಾರಾಟಕ್ಕೆ ಡಿ.06ರ ಬೆಳಗ್ಗೆ 10 ಗಂಟೆಗೆ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಮಲಪನಗುಡಿ ಬಳಿ ಅಂಜಿನಪ್ಪ ಅವರ ಹೊಲದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಸಿಐಡಿ ಡಿವೈಎಸ್ಪಿ ಎಸ್.ಅಸ್ಲಾಂ ಭಾಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.