ಹೊಸಪೇಟೆ: ಜೆನ್ನಿ ಮಿಲ್ಕ್ ಕಂಪನಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ನಾಲ್ಕೂವರೇ ತಿಂಗಳ ಬಳಿಕ ಮತ್ತೊಬ್ಬ ಆರೋಪಿಯನ್ನು ಬಂಧಿಸಿ ನ್ಯಾಯಂಗ ಬಂದನಕ್ಕೆ ತಗೆದುಕೊಂಡಿದ್ದಾರೆ.
ತಾಲೂಕಿನ ಗಾಳೆಮ್ಮನ ಗುಡಿಯ ಬಳಿ ಶೇಡ್ ನಿರ್ಮಾಣ ಮಾಡಿ ಕತ್ತೆಗಳನ್ನು ಸಾಕುತ್ತಿದ್ದ ಅಂಜಿನೆಪ್ಪ, ಕಳೆದ ನಾಲ್ಕೂವರೆ ತಿಂಗಳುಗಳಿAದ ಸಿಐಡಿ ಪೊಲೀಸರಿಂದ ತಲೆ ಮರೆಸಿಕೊಂಡಿದ್ದರು. ಈಗ ಸಿಐಡಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಂಪನಿಯಿAದ ರಾಜ್ಯದ ವಿವಿಧ ಕಡೆಯ ರೈತರಿಗೆ ಅಂದಾಜು 13 ಕೋಟಿ ರೂ. ಅಧಿಕ ವಂಚನೆ ಆಗಿದೆ ಎಂದು ಇಲ್ಲಿನ ಪಟ್ಟಣ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಕಂಪನಿ ಎಂಡಿ ನೂತಲಪಾಟಿ ಮುರಳಿ ಸೇರಿದಂತೆ ಐದು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಕಲುಬುರಗಿ ವಿಭಾಗದ ಸಿಐಡಿ ಡಿವೈಎಸ್ಪಿ ಅಸ್ಲಾಂಪಾಷಾ ನೇತೃತ್ವದಲ್ಲಿ ಸಿಐಡಿಗೆ ಪ್ರಕರಣವನ್ನು ಒಪ್ಪಿಸಲಾಗಿದೆ. ಇನ್ನೂ ಕೆಲ ದಿನಗಳಲ್ಲಿ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಈ ಪ್ರಕಣದಲ್ಲಿ ಅನ್ಯಾಯಾಕ್ಕೆ ಒಳಗಾದ ರೈತರಿಗೆ ನ್ಯಾಯಾ ಸಿಗುತ್ತ? ಎಂಬುದು ಕಾದುನೋಡಬೇಕಿದೆ.