ಜಿಲ್ಲೆ

ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡಲಿ

ಹೋಸಪೇಟೆ: ಸಮಾಜದ ಅಭಿವೃದ್ಧಿಗಾಗಿ ಖಾಸಗಿ ಸಂಸ್ಥೆಗಳ ಮೀಸಲಿಟ್ಟ ಹಣವನ್ನು ಜೆಸಿಐ ಇನ್ನಷ್ಷು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಮೈನಿಂಗ್ ಸರ್ವಿಸಸ್ ಮುಖ್ಯಸ್ಥ ಎಸ್.ಕಾಮೇಶ್ವರರಾವ್ ಹೇಳಿದರು.

ನಗರದಲ್ಲಿ ಸೋಮವಾರ ಜೆಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಸಿಐ ನೂತನ ಪದಾಧಿಕಾರಿಗಳಿಂದ ಧನಾತ್ಮಕ ಬದಲಾವಣೆಯಾಗಲಿ. ಖಾಸಗಿ ಕಂಪನಿಗಳು ಮೀಸಲಿರಿಸಿದ ಹಣವನ್ನು ಬಳಸಿಕೊಂಡು ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಬೇಕಿದೆ. ಇದಕ್ಕಾಗಿ ಜೆಸಿಐ ಯೋಗ್ಯ ಯುವಪಡೆಯನ್ನು ಅಣಿಗೊಳಿಸಬೇಕು ಎಂದರು.

ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಭಿವೃದ್ಧಿ ನಿರೀಕ್ಷಕಿ ಪೂರ್ಣಿಮಾ ಯೋಳಭಾವಿ ಮಾತನಾಡಿ, ಸಮಾಜದ ಏಳ್ಗೆಗಾಗಿ ಪ್ರಜ್ಞಾವಂತ ನಾಗರಿಕರು ಅವಕಾಶಗಳನ್ನು ಕಲ್ಪಿಸಿಕೊಳ್ಳಬೇಕು. ಈ ಮೂಲಕ ಸಾಮಾಜಿಕ ಪಿಡುಗಳಾದ ಬಾಲ್ಯ ವಿವಾಹ, ದೇವದಾಸಿ ಪದ್ಧತಿ ಸೇರಿದಂತೆ ಸಮಾಜದಲ್ಲಿ ಬೇರೂರಿವ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಎಲ್ಲರೂ ಕೈಜೋಡಿಸಬೇಕು. ಇದಕ್ಕಾಗಿ ಜೆಸಿಐ ವಿದ್ಯಾರ್ಥಿ-ಯುವಜನರಿಗೆ ತರಬೇತಿ ನೀಡಲಿ ಎಂದು ಸಲಹೆ ನೀಡಿದರು.

ಈ ಸಾಲಿನ ಜೆಸಿಐ ಅಧ್ಯಕ್ಷರಾಗಿ ಹರೀಶ್ ಬಡಿಗೇರ್, ಉಪಾಧ್ಯಕ್ಷರಾಗಿ ರೇಖಾ ಶಿವರಾಜ್, ಎಂ.ವಿ.ದೀಪ, ಶ್ರೀವತ್ಸ ರಾವ್ ಬಿ.ಕೆ., ಶಿವಪ್ರಸಾದ್ ಬಿ.ಸಿ. ಜಿ.ಟಿ.ಆಕಾಶ್, ಸಲೀಂ ಜಾಫರ್. ಕಾರ್ಯದರ್ಶಿಯಾಗಿ ಅಶೋಕ್ ಕುಮಾರ್ ಡಿ.ಎಸ್., ಸಹ ಕಾರ್ಯದರ್ಶಿಯಾಗಿ ಡಾ.ಶಬ್ಬೀರ್ ಅಹ್ಮದ್, ಕೋಶಾಧ್ಯಕ್ಷಯಾಗಿ ಕಟ್ಟಾ ಶ್ರೀರಾಮ್‌ನಾಗ್, ನಿರ್ದೇಶಕರಾಗಿ ಕೆ.ಪ್ರದೀಪ್, ಸಮೀರ್ ಅಹ್ಮದ್, ಚನ್ನಬಸವಸ್ವಾಮಿ, ಎಚ್.ಡೇವಿಡ್, ಲೇಡಿ ಜೆಸಿ ಶರ್ವಾಣಿ ಕಾಕುಬಾಳ್, ಜ್ಯೂನಿಯರ್ ಜೆಸಿ ಘಟಕದ ಅಧ್ಯಕ್ಷೆಯಾಗಿ ಕೆ.ಸುಪ್ರಿಯಾ, ಕಾರ್ಯದರ್ಶಿಯಾಗಿ ಬಿ.ಆರ್.ಪ್ರದ್ಯುಮ್ನ ಅಧಿಕಾರ ವಹಿಸಿಕೊಂಡರು.