ಹೊಸಪೇಟೆ: ಪಾಕ್‌ಗೆ ಯುದ್ಧಕ್ಕೆ ಹೋಗಲು ಸಿದ್ಧನಿದ್ದೇನೆ, ಬಿಜೆಪಿ ಮುಖಂಡ ಪ್ರತಾಪ ಸಿಂಹ ಕೂಡ ಬರಲಿ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದರು.
ನಗರದಲ್ಲಿ ಶನಿವಾರ ಸಿದ್ದಿಗಾರರೊಂದಿಗೆ ಮಾತನಾಡಿ, ನಾನು ಪಾಕ್ ಮೇಲೆ ಯುದ್ಧ ಮಾಡೋಕೆ ಹೋಗಲು ಸಿದ್ಧ ಎಂದು ಮತ್ತೆ ಹೇಳುತ್ತಿದ್ದೇನೆ. ನಿನ್ನೆ ಹೇಳಿದ ಮಾತಿಗೆ ಮತ್ತೆ ಸಮರ್ಥನೆ ಮಾಡಿಕೊಳ್ಳುವೆ. ನನ್ನ ಜತೆ ಪ್ರತಾಪ ಸಿಂಹ ಯುದ್ಧಕ್ಕೆ ಬರ್ತಾರಾ..? ಅಂತಾ ಕೇಳಿ ಎಂದರು.
ನಾನು ನಿಜವಾಗಲು ಹೇಳ್ತಾ ಇದ್ದೇನೆ, ತಮಾಷೆ ಮಾತಲ್ಲ. ದೇಶಕ್ಕೋಸ್ಕರ ಅಷ್ಟು ತ್ಯಾಗ ಮಾಡ್ಲಿಲ್ಲ ಅಂದಾರೆ ಮತ್ತೇನಿದೆ? ಪಾಕಿಸ್ತಾನ ಸತ್ತೋಗಿದೆ. ಅಲ್ಲಿ ಏನಿಲ್ಲ ಬಿಡಿ. ನಾನೊಬ್ಬ ಮಂತ್ರಿಯಾಗಿ ಹೇಳಿದ್ದೀನಿ. ದೇಶದ ಬಗ್ಗೆ ಅಭಿಮಾನ ಇಟ್ಕೊಂಡು ಹೇಳುತ್ತಿರುವೆ. ದೇಶಕ್ಕೋಸ್ಕರ ನಾನು ತ್ಯಾಗ ಆಗೋಕೆ ಸಿದ್ಧ. ಪ್ರಧಾನಿ ಮೋದಿಗೆ ಹೇಳಿ ನನಗೆ ಅವಕಾಶ ಮಾಡಿಕೊಡೋಕೆ.
ಪ್ರತಾಪ ಸಿಂಹ ಬರಿ ಮಾತಾಡ್ತಾರೆ ಬಿಡಿ. ಆದ್ರೆ ನಾನು ಹೋಗೋಕೆ ಸಿದ್ಧನಿದ್ದೇನೆ. ಬಿಜೆಪಿ ಮೆಜ್ಯಾರಿಟಿ ಬಂದು ಯಡಿಯೂರಪ್ಪ ಸಿಎಂ ಆದರೆ, ಅವರ ಮನೆ ವಾಚಮೆನ್ ಆಗುತ್ತೇನೆ ಎಂದಿದ್ದೇ. ಆದ್ರೆ ಅವರು ಮೆಜಾರಿಟಿ ಬಂದ್ರಾ? ರಾಜ್ಯದಲ್ಲಿ ಮ್ಯಾಜಿಕ್ ನಂಬರ್ 113 ಬಂತಾ? 110 ಸೀಟ್ ಬಂದಿತ್ತು. ರಾಜ್ಯದ ಜನ ಆಶೀರ್ವಾದ ಮಾಡಿ ಬಿಜೆಪಿಗೆ ಯಾವತ್ತು ಬಹುಮತ ಕೊಟ್ಟಿಲ್ಲ. ಆಪರೇಶನ್ ಕಮಲ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದು, ಪ್ರತಾಪ ಸಿಂಹ ಹೇಳಿಕೆಗೆ ಸಚಿವ ಜಮೀರ್ ಟಾಂಗ್ ನೀಡಿದರು.