ಹೊಸಪೇಟೆ: ತಾಲೂಕಿನ ಎರಡನೇ ಅತಿದೊಡ್ಡ ಶಿವ ದೇಗುಲ ಎಂಬ ಖ್ಯಾತಿಯ ಐತಿಹಾಸಿಕ ಜಂಬುನಾಥೇಶ್ವರ ಸ್ವಾಮಿಯ ಭವ್ಯ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಭಾವದೊಂದಿಗೆ ಎಳೆಯಲಾಯಿತು.
ರಥೋತ್ಸವ ನಿಮಿತ್ತ ಬೆಳಿಗ್ಗೆಯಿಂದಲೇ ದೇಗುಲದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ನಡೆದವು. ಭಕ್ತರು ದೇವರಿಗೆ ಕಾಯಿ ಕೊಟ್ಟು ದರ್ಶನ ಪಡೆದರು. ಸಂಜೆಯಾಗುತ್ತಿದ್ದAತೆ ಭಕ್ತರ ದಂಡು ದೇಗುಲದ ಆವರಣದತ್ತ ಆಗಮಿಸಿತು. ರಥೋತ್ಸವಕ್ಕೂ ಮೊದಲು ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ, ಭಕ್ತರು ರಥೋತ್ಸವಕ್ಕೆ ಉತ್ತುತ್ತಿ ಹಾಗೂ ಬಾಳೆಹಣ್ಣು ಸಮರ್ಪಿಸಿ ಭಕ್ತಿ ಹರಕೆ ತೀರಿಸಿದರು.