ಜಿಲ್ಲೆ

ನಿವೇಶನ ನೀಡುಲು ಮೀನಾಮೇಷ ಸಲ್ಲದು

ಮಂಜುನಾಥ

ಹೊಸಪೇಟೆ: ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ಶಾಲಾ ಆಸ್ತಿಗಳು ಸರ್ಕಾರದ ಹೆಸರಿಗೆ ನೊಂದಣಿ ಆಗದೇ ಬಾಕಿ ಇದ್ದಲ್ಲಿ, ಸ್ವಂತ ನಿವೇಶನ ಕೊರತೆ ಇದ್ದಲ್ಲಿ ಸಮನ್ವಯತೆಯಿಂದ ಪರಿಶೀಲಿಸಿ ಅಭಿಯಾನದಂತೆ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಶಾಲಾ ಆಸ್ತಿ ನೊಂದಾಣಿ, ಹಕ್ಕು ಬದಲಾವಣೆ, ಅಂಗನವಾಡಿ ಕಟ್ಟಡ, ನಿವೇಶನ ಒದಗಿಸುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ನಿವೇಶನ ಲಭ್ಯವಿಲ್ಲದ ಅಂಗನವಾಡಿ ಕೇಂದ್ರಗಳು ನಗರ ವ್ಯಾಪ್ತಿಯಲ್ಲಿ 77 ಹಾಗೂ ಗ್ರಾಮೀಣ ಭಾಗದಲ್ಲಿ 14 ಕೇಂದ್ರಗಳು ಇವೆ. ಮತ್ತು ಇ-ಖಾತಾ ಬಾಕಿ ಇರುವ ಕೇಂದ್ರಗಳು ನಗರ ವ್ಯಾಪ್ತಿಯಲ್ಲಿ 175 ಗ್ರಾಮೀಣ ಭಾಗದಲ್ಲಿ 1050 ಕೇಂದ್ರಗಳು ಇವೆ. ಶಾಲಾ ಆಸ್ತಿಗಳು ಸರ್ಕಾರದ ಹೆಸರಿಗೆ ನೊಂದಾಣಿ ಆಗದೇ ಪ್ರಾಥಮಿಕ ಶಾಲೆಗಳು 587, ಪ್ರೌಢಶಾಲೆಗಳು 48 ಸೇರಿದಂತೆ ಒಟ್ಟು 635 ಬಾಕಿ ಇವೆ. ಇವುಗಳನ್ನು ಯಾವುದೇ ಕಾರಣಕ್ಕೆ ನಿರ್ಲಕ್ಷತೆ ವಹಿಸದೇ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಮತ್ತು ಗ್ರಾಪಂ ಪಂಚಾಯತಿ ಅಧಿಕಾರಿಗಳು ಹತ್ತು ದಿನದೊಳಗೆ ಪೂರ್ಣಗೊಳಿಸಬೇಕು. ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಬೇಕಾದ ಅಧಿಕಾರಿಗಳು ಅಂಗನವಾಡಿಗಳ ಅಭಿವೃದ್ಧಿಗೆ ಹೆಚ್ಚಿನ ಆಸ್ಯತೆ ನೀಡಬೇಕು. ಅಂಗನವಾಡಿ ಕೇಂದ್ರಗಳು ಸುಸ್ಥಿತಿಯಲ್ಲಿದ್ದರೇ ಮಾತ್ರ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಣ ಇಲಾಖೆ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ ಎಂದರು.

ಜಿಪA ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಕ್ರಂ ಅಲಿ ಷಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಅಯಾ ಗ್ರಾಪಂ ಪಿಡಿಒಗಳು ಸ್ಥಳ ಪರಿಶೀಲನೆ ನಡೆಸಿ ಗ್ರಾಮನತ್ತು, ಗ್ರಾಮಠಾಣಾ ವ್ಯಾಪ್ತಿಯಲ್ಲಿದ್ದರೇ ಅಧಿಕೃತ ನಮೂನೆಗಳನ್ನು ನೀಡಬೇಕು. ಅಂಗನವಾಡಿ ಕೇಂದ್ರಗಳಿಗೆ ನಿವೇಶನಗಳ ಅಗತ್ಯವಿದ್ದರೇ ಕೂಡಲೇ ಸ್ಥಳ ಗುರುತಿಸಿ ವರದಿ ನೀಡಬೇಕು ಎಂದರು.