oplus_0 
ಜಿಲ್ಲೆ

ಇಂದಿರಾ ಕ್ಯಾಂಟೀನ್ ಪ್ರವಾಸಿಗರಿಗೂ ಅನುಕೂಲ

ಮಂಜುನಾಥ

ಹೊಸಪೇಟೆ: ಇಂದಿರಾ ಕ್ಯಾಂಟೀನ್ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರಿಗೆ ಮಾತ್ರವಲ್ಲದೇ ಹಂಪಿಗೆ ಬರುವ ಪ್ರವಾಸಿಗರಿಗೂ ಅನುಕೂಲವಾಗಲಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ತಾಲೂಕಿನ ಕಮಲಾಪುರದಲ್ಲಿ 2ನೇ ವಾರ್ಡ್ನಲ್ಲಿ ನಿರ್ಮಾಣವಾದ ನೂತನ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಶನಿವಾರ ಉದ್ಘಾಟನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಡವರ ಸಲುವಾಗಿಯೇ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಹಿಂದಿನ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು, ಅದನ್ನು ಒಳ್ಳೆಯತನದಿಂದ ನಡೆಸಿಕೊಂಡು ಇಂದಿನ ಸರ್ಕಾರ ಮುಂದುವರೆಸಿಕೊAಡು ಹೋಗುತ್ತಿರುವುದು ಶ್ಲಾಘನೆಯ ಸಂಗತಿಯಾಗಿದೆ. ಯೋಜನೆಗಳು ಬಹಳಷ್ಟು ಬರುತ್ತವೆ, ಅವುಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವುದು ಮಹತ್ವದ್ದು. ಟೆಂಡರ್ ಪಡೆದ ಗುತ್ತಿಗೆದಾರ ಜನರಿಗೆ ಗುಣಮಟ್ಟದ ಆಹಾರ ಒದಗಿಸಬೇಕು. ದೂರುಗಳು ಬಂದರೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಇಂದಿನ ದುಬಾರಿ ದಿನಮಾನದಲ್ಲಿಯೂ ಕಡಿಮೆ ದರದಲ್ಲಿ ಆಹಾರ ವಿತರಿಸುವ ಇಂದಿರಾ ಕ್ಯಾಂಟೀನ್ ಬಡವರಿಗೆ ವರವಾಗಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಟಿಫಿನ್‌ಗೆ 5 ರೂ. ಊಟಕ್ಕೆ 10 ರೂಪಾಯಿ ನಿಗದಿ ಮಾಡಿದ್ದು, ಒಂದು ದಿನಕ್ಕೆ ಬೆಳಗ್ಗೆ 300 ಟಿಫಿನ್, ಮಧ್ಯಾಹ್ನ ಊಟ ಮತ್ತು ರಾತ್ರಿ 300 ಊಟದ ವ್ಯವಸ್ಥೆಯನ್ನು ಇಂದಿರಾ ಕ್ಯಾಂಟೀನ್‌ನಲ್ಲಿಮಾಡಲಾಗುತ್ತಿದೆ. ಇದು ಬಡವರಿಗೆ ಖಂಡಿತ ನೆರವಾಗುವ ಭರವಸೆ ಇದೆ. ಬಡವರ ಸಲುವಾಗಿಯೇ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಹಿಂದಿನ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು, ಅದನ್ನು ಒಳ್ಳೆಯತನದಿಂದ ನಡೆಸಿಕೊಂಡು ಇಂದಿನ ಸರ್ಕಾರ ಮುಂದುವರೆಸಿಕೊAಡು ಹೋಗುತ್ತಿರುವುದು ಶ್ಲಾಘನೆಯ ಸಂಗತಿಯಾಗಿದೆ. ಯೋಜನೆಗಳು ಬಹಳಷ್ಟು ಬರುತ್ತವೆ, ಅವುಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವುದು ಮಹತ್ವದ್ದು ಎಂದರು.