ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದ ಬಳಿಯಿರುವ ಇಂದಿರಾ ಕ್ಯಾಂಟೀನ್. 
ಜಿಲ್ಲೆ

ಹೊಸಪೇಟೆಯಲ್ಲಿ ಇನ್ನೊಂದು ಇಂದಿರಾ ಕ್ಯಾಂಟಿನ್

ಮಂಜುನಾಥ

ಹೊಸಪೇಟೆ: ವಿದ್ಯಾರ್ಥಿಗಳ ಬೇಡಿಕೆಯಂತೆ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮತ್ತೊಂದು ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬುಧವಾರ ಅನುಮೋದನೆ ನೀಡಿದೆ.

ಕೆಲ ದಿನಗಳ ಹಿಂದೆ ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಸೇರಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರಿಗೆ ಮನವಿಪತ್ರ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮನವಿಪತ್ರ ರವಾನಿಸಿದ್ದರು. ಇದರ ಆಧಾರದ ಮೇಲೆ ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಸರ್ಕಾರಿ, ಖಾಸಗಿಯ ಪದವಿ ಹಾಗೂ ಪ.ಪೂ. ಕಾಲೇಜು ಹಾಗೂ ಶಾಲೆಗಳಿವೆ. ಹೆಚ್ಚಾಗಿ ಗ್ರಾಮೀಣ ಹಾಗೂ ಬಡವರ ಮಕ್ಕಳು ಇರುವ ಹಿನ್ನೆಲೆಯಲ್ಲಿ ಈಗ ಇಂದಿರಾ ಕ್ಯಾಂಟಿನ್ ಅನುಕೂಲ ಆಗಲಿದೆ.

ವಿಜಯನಗರ ಜಿಲ್ಲೆಯಲ್ಲಿ 11 ಕ್ಯಾಂಟಿನ್‌ಗಳಲ್ಲಿ ಈಗ ಐದು ಕ್ಯಾಂಟಿನ್ ಚಾಲ್ತಿಯಲ್ಲಿದೆ. ಹೊಸಪೇಟೆ ನಗರದಲ್ಲೇ ಈಗಾಗಲೇ ಮೂರು ಕ್ಯಾಂಟಿನ್ ಗಳಿವೆ. ಈಗ ಮತ್ತೊಂದು ಕ್ಯಾಂಟಿನ್ ಆರಂಭವಾಗಲಿದೆ. ಕಮಲಾಪುರ, ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ ಮತ್ತು ಹರಪನಹಳ್ಳಿಯಲ್ಲೂ ಇಂದಿರಾ ಕ್ಯಾಂಟಿನ್ ಆರಂಭವಾಗಲಿದೆ. ಈಗ ಇಂದಿರಾ ಕ್ಯಾಂಟಿನ್ ಅನ್ನು ಹೊಸಪೇಟೆ ನಗರಸಭೆ ಆರಂಭಿಸಲಿದೆ.

ಈಗ ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಇಂದಿರಾ ಕ್ಯಾಂಟಿನ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಈ ಭಾಗದ ಕಾಲೇಜಿನಲ್ಲಿ ಹತ್ತಿರ ಅನೇಕ ಸರ್ಕಾರಿ ಕಾಲೇಜುಗಳಿದ್ದು ಅಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಊಟಕ್ಕೆ ತೊಂದರೆಯಾಗುತ್ತಿದ್ದು ಇಂದಿರಾ ಕ್ಯಾಂಟಿನ್ ಆರಂಭವಾದರೆ, ಬಡ ಮಕ್ಕಳಿಗೆ ಕಡಿಮೆ ದರದಲ್ಲಿ ಊಟ ಮಾಡಲು ಅನುಕೂಲವಾಗಲಿದೆ.