ಹೊಸಪೇಟೆ: ಕಾಂಗ್ರೆಸ್‌ನಿAದ ಈಗಾಗಲೇ ಹಲವು ಬಾರಿ ತಿದ್ದುಪಡಿ ಮಾಡೋ ಮೂಲಕ ಸಂವಿಧಾನ ಬದಲಾವಣೆ ಮಾಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಂಬೇಡ್ಕರ್ ಆಗಲು ಹೋರಟಿದ್ದಾರೆ ಎಂಸು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎಷ್ಟು ಬಾರಿ ಅಧಿಕಾರಕ್ಕೆ ಬಂದಿದೆಯೋ ಅಷ್ಟು ಬಾರಿ ಅಂದಾಜು 75 ಸಾರಿ ಸಂವಿದಾನ ಬದಲಾವಣೆ ಮಾಡಿದ್ದಾರೆ. ಸಂವಿದಾನ ಬದಲಾವಣೆ ಮಾಡುತ್ತೆವೆ ಎಂದು ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ಕೆಲಸ ಕಾಂಗ್ರೆಸ್ ಹಾಗೂ ಡಿ.ಕೆ.ಶಿವಕುಮಾರನಿಂದ ನಡೆದಿದೆ. ರಾಮಾಯಣ, ಭಗವತ್ ಗೀತೆಯಂತೆ ಸಂವಿದಾನವನ್ನು ಕೂಡ ತಾಯಿ ಇದ್ದಂತೆ. ಒಂದು ಸಂವಿದಾನದ ಒಲೈಕೆಗೆ ಕಾಂಗ್ರೆಸ್ ಈ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ.
ಅಮಿತ್ ಷಾ ಅವರು, ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಗಳನ್ನು ಎಡಿಟಿಂಗ್ ಮಾಡಿ ತಿರುಚಲಾಗಿತ್ತು. ಕಾಂಗ್ರೆಸ್ ಸಾಲು, ಸಾಲು ಪ್ರತಿಭಟನೆಗಳನ್ನು ಮಾಡಿದರು. ಬ್ರಿಟಿಷರಂತೆ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಜನರಿಗೆ ತಪ್ಪು ಭಾವನೆ ಬರುವಂತೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಹಿಂದೆ ಸಂವಿಧಾನ ಬದಲಿಸೋ ತಂತ್ರ ಇದೆ. ಜನರು ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.
ಹನಿಟ್ರಾಪ್ ವಿಚಾರವಾಗಿ ಸಚಿವ ರಾಜಣ್ಣ ಅವರೆ ಹೇಳಿದ್ದಾರೆ. ಕಾಂಗ್ರೆಸ್ ನವರು ಅವರವರ ಖುರ್ಚಿ ಉಳಿಸಿಕೊಳ್ಳಲು ಇದೇಲ್ಲಾ ಪ್ರಯತ್ನ ನಡೆಯುತ್ತಿದೆ. 48 ಜನರ ಸಿಡಿ ಅಷ್ಟೆ ಅಲ್ಲಾ, ರಾಜ್ಯ ರಾಷ್ಟ್ರ ನಾಯಕರ ಸಿಡಿಗಳು ಕೂಡ ಇವೆ ಎನ್ನಲಾಗುತ್ತಿದೆ. ಸಿಡಿ, ಹನಿಟ್ರಾಪ್ ಕುರಿತು ಸಿಬಿಐ ತನಿಖೆಯಾಗಲಿ. ಕಾಂಗ್ರೆಸ್‌ನಲ್ಲಿ ಹಗರಣಗಳು ಬಿಟ್ಟರೆ ಬೇರೆನು ನಡೆದಿಲ್ಲ. ಹಗರಣಗಳನ್ನು ಮುಚ್ಚಲು ರಾಜ್ಯಗಳಲ್ಲಿ ಗಲಬೆಗಳನ್ನು ಕಾಂಗ್ರೆಸ್‌ನಿAದ ಸೃಷ್ಠಿಯಾಗುತ್ತಿದೆ ಎಂದು ಆರೋಪಿಸಿದರು.