ಜಿಲ್ಲೆ

ಮಾತೃ ಸ್ಥಾನದಲ್ಲಿ ಇತಿಹಾಸಕಾರರು

ಮಂಜುನಾಥ

ಹೊಸಪೇಟೆ : ಕರ್ನಾಟಕ ಇತಿಹಾಸ ಅಕಾಡೆಮಿಯವರು ನಮ್ಮ ಇಲಾಖೆಯನ್ನು ಜಾಗೃತಗೊಳಿಸಬೇಕು. ಇತಿಹಾಸಕಾರರು ಇತಿಹಾಸದ ವಿಷಯಗಳ ಮೇಲೆ ಹೊಸ ಬೆಳಕು ಚೆಲ್ಲಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಕನ್ನಡ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿ ಸಹಯೋಗದಲ್ಲಿ ವಿವಿಯ ಮಂಟಪ ಸಭಾಂಗಣದಲ್ಲಿ 38ನೇ ವಾರ್ಷಿಕ ರಾಷ್ಟಿçÃಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇತಿಹಾಸಕಾರರು ಮಾತೃ ಸ್ಥಾನದಲ್ಲಿ ಇರುವಿರಿ. ನೀವೇ ಶ್ರೇಷ್ಠರು. ಹೋಲಿಕೆ ಮಾಡಿಕೊಂಡು ನೋವು ಪಡಬೇಡಿ. ನಿಮ್ಮ ಕೆಲಸ ನೀವು ಮಾಡಿ. ನಮ್ಮ ಪುರಾತತ್ವ ಇಲಾಖೆಯು ಕರ್ನಾಟಕದ ಐತಿಹಾಸಿಕ ಸ್ಮಾರಕಗಳು, ಅವಶೇಷಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿದೆ. ಸ್ಮಾರಕಗಳ ಸಂರಕ್ಷಣೆಗಾಗಿ ಸ್ಮಾರಕದತ್ತು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಸಾಂಸ್ಕೃತಿಕವಾಗಿ ನಾವು ಶ್ರೀಮಂತರಾಗಿದ್ದೇವೆ. 25 ಸಾವಿರ ಸ್ಮಾರಕಗಳಲ್ಲಿ 844 ಸ್ಮಾರಕಗಳನ್ನು ಮಾತ್ರ ಅಧಿಸೂಚಿಸಲಾಗಿದೆ. ಇನ್ನು ಉಳಿದ ಸ್ಮಾರಕಗಳನ್ನು ಅಧಿಸೂಚಿಸಬೇಕಾಗಿದೆ. ನೀವು ಇತಿಹಾಸ ಅಕಾಡೆಮಿಯವರು ಸ್ಮಾರಕಗಳನ್ನು ಅಧಿಸೂಚಿಸುವ ಕೆಲಸವನ್ನು ಸಿದ್ಧಮಾಡಿಕೊಟ್ಟರೆ ತಾಂತ್ರಿಕ, ಆಡಳಿತ ಬಲ, ಆರ್ಥಿಕ ಬಲ ನೀಡಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದರು.

ಸುಮಾರು 556 ಸ್ಮಾರಕಗಳನ್ನು ಸ್ಕಿçÃನಿಂಗ್, ಸ್ಕಾö್ಯನಿಂಗ್ ಹಾಗೂ 3ಡಿ ಡಿಜಿ಼ಟಲ್ ತಂತ್ರಾAಶದ ಮೂಲಕ ದಾಖಲಿಸುವ ಕೆಲಸ ಪ್ರವಾಸೋದ್ಯಮದ ಮೂಲಕ ನಡೆದಿದೆ. ಗ್ರಾಮಾವಾರು ಸರ್ವೇಕಾರ್ಯ ನಡೆಯುತ್ತಿದೆ. ಡೆಕ್ಕನ್ ಸುಲ್ತಾನಿ, ಹಿರೇಬೆನಕಲ್‌ನ ಪ್ರೀಹಿಸ್ಟಾರಿಕ್ ಸೈಟ್, ಶ್ರೀರಂಗಪಟ್ಟಣದ ಕೋಟೆಗಳು, ಬದಾಮಿ ಐಹೊಳೆಯನ್ನು ಪಟ್ಟದಕಲ್ಲಿನೊಂದಿಗೆ ಸೇರಿಸುವುದು ಹೀಗೆ ಈ ನಾಲ್ಕು ಸ್ಥಳಗಳನ್ನು ವಿಶ್ವ ಜಾಗತಿಕ, ಪಾರಂಪರಿಕ ಪಟ್ಟಿಗೆ ಸೇರಿಸಲು ಪ್ರಯತ್ನ ನಡೆದಿದೆ. ಪ್ರಾಚೀನ ಸ್ಮಾರಕಗಳನ್ನು ಹಾಗೂ ಅವಶೇಷಗಳನ್ನು ರಕ್ಷಿಸುವ ಸಲುವಾಗಿ ಹಾಗೂ ವಿರೂಪಗೊಳಿಸುವುದನ್ನು ತಡೆಯಲು 2024ರ ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ಸ್ಮಾರಕಗಳ ಹಾಗೂ ಅವಶೇಷಗಳ ತಿದ್ದುಪಡಿ ಕಾಯಿದೆ ಜಾರಿಗೆ ತಂದು ದಂಡದ ಹಾಗೂ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಸರ್ಕಾರ ಕ್ರಮವಹಿಸಿದೆ. ಇತಿಹಾಸ ಅಕಾಡೆಮಿಯ ಸಂಶೋಧಕರ ಸಂಶೋಧನೆಗಾಗಿ ಪ್ರತಿ ವರ್ಷ 5 ಲಕ್ಷ ನೆರವು ನೀಡುವುದಾಗಿ ಪ್ರಕಟಿಸಿದರು.

ಶಾಸಕ ಎಚ್.ಆರ್.ಗವಿಯಪ್ಪ ಇತಿಹಾಸ ದರ್ಶನ ಸಂಪುಟ-39ನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಮಕ್ಕಳು ಇತಿಹಾಸವನ್ನು ಮರೆಯುತ್ತಿದ್ದಾರೆ. ಆದ್ದರಿಂದ ಇತಿಹಾಸವನ್ನು ಕುರಿತು ಶೇರಿಂಗ್ ಸೆಂಟರ್‌ಗಳನ್ನು ತೆರೆಯಲು ಸರ್ಕಾರ ನೆರವು ನೀಡಬೇಕು ಎಂದರು.

ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ರಾಜಶೇಖರ್ ಪ್ರಾಸ್ತಾವಿಕ ಮಾತನಾಡಿ, ಇತಿಹಾಸದ ಸಾಹಿತ್ಯವು 2ನೇ ದರ್ಜೆಯ ಸಾಹಿತ್ಯವಾಗುತ್ತಿದೆ ಎಂದು ವಿಷಾದಿಸಿದರು. ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶೋಧಕರಿಗೆ ಲಿಪಿ, ಭಾಷಾ ಸಾಹಿತ್ಯದ ಹಿಡಿತವಿರಲಿ

ಜನಸಾಮಾನ್ಯರಿಗೆ ನಮ್ಮ ನಾಡಿನ ಶಾಸನಗಳ ಪರಿಚಯ ಆಗಬೇಕು. ಅವುಗಳ ಸಂರಕ್ಷಣೆಯಾಗಬೇಕು. ಕರ್ನಾಟಕ ಇತಿಹಾಸ ಅಕಾಡೆಮಿಯ ಅಭಿವೃದ್ಧಿಯಲ್ಲಿ ಶಾಸನ ತರಗತಿಗಳ ವಿದ್ಯಾರ್ಥಿಗಳ ಪಾತ್ರ ತುಂಬಾ ಮಹತ್ವವಾಗಿದೆ. ಇಂದಿನ ಯುವಜನಾಂಗ ಹಿರಿಯರ ಒಡನಾಟದಿಂದ ಬಹಳಷ್ಟು ಕಲಿಯಬೇಕಾಗಿದೆ. ಬಹಳ ಹಿಂದೆಯೇ ಪ್ರಕಟವಾಗಿರುವ ಡಾ.ಎಂ.ಚಿದಾನAದಮೂರ್ತಿ ಅವರ ಸಣ್ಣ ಪುಸ್ತಕ `ಸಂಶೋಧನೆ' ಎಂಬ ಪುಸ್ತಕ ಇಂದಿಗೂ ಮಹತ್ವದ ಗ್ರಂಥವಾಗಿದೆ. ಸಂಶೋಧನೆಗೆ ಪೂರ್ವ ಸಿದ್ಧತೆ ಬೇಕು. ಈ ಸಿದ್ಧತೆಯ ಮೊದಲ ಹಂತವೆAದರೆ ಹಿಂದಿನ ವಿದ್ವಾಂಸರ ಸಂಶೋಧನಾ ಕೃತಿಗಳನ್ನು ಶ್ರದ್ಧೆಯಿಂದ ಓದುವುದು ಮೂಲ ಆಕರಗಳನ್ನು ಶೋಧಿಸುವವರಿಗೆ ಲಿಪಿ ಮತ್ತು ಭಾಷಾ ಸಾಹಿತ್ಯದ ಮೇಲೆ ಹಿಡಿತವಿರಬೇಕು. ಕನ್ನಡ ಸಂಶೋಧಕರಿಗೆ ಇಂಗ್ಲಿಷ್ ಬಾರದಿದ್ದರೆ ಏನೂ ಚಿಂತೆಯಿಲ್ಲ ಒಂದೆರಡು ಭಾರತೀಯ ಭಾಷೆಗಳ ಪರಿಚಯವಿರಬೇಕು ಎಂದು ಸಮ್ಮೇಳನದ ಸರ್ವಾಧ್ಯಕ್ಷ ಶಾಸನ ತಜ್ಞ ಹಾಗೂ ಸಂಶೋಧಕ ಡಾ.ಆರ್.ಶೇಷಶಾಸ್ತಿç ಹೇಳಿದರು.