ಹೊಸಪೇಟೆ: ಎರಡನೇ ಶನಿವಾರ ಹಾಗೂ ಭಾನುವಾರ ವೀಕೆಂಡ್ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬಂದಿದ್ದಾರೆ.
ವಿಕೇAಡ್ ಹಿನ್ನೆಲೆಯಲ್ಲಿ ಶುಕ್ರವಾರದಿಂದಲ್ಲೇ ಪ್ರವಾಸಿಗರು ಹಂಪಿ ಕಡೆ ಮುಖ ಮಾಡಿದ್ದಾರೆ. ಶನಿವಾರ ಹಾಗೂ ಭಾನುವಾರ ಹೆಚ್ಚಿನ ಪ್ರವಾಸಿಗರು ಹರಿದು ಬಂದಿದ್ದಾರೆ. ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲ ವೀಕ್ಷಣೆಗೆ ಎರಡು ದಿನ 30 ಸಾವಿರಕ್ಕೂ ಅಧಿಕ ಜನ ಬಂದಿದ್ದು, ಭಾನುವಾರ 70 ಸಾವಿರ ಕ್ಕೂ ಅಧಿಕ ಜನ ಹರಿದು ಬಂದಿದ್ದಾರೆ.
ಪ್ರವಾಸಿಗರು ಸಾಸಿವೆ ಕಾಳು ಗಣಪ, ಕಡಲೆ ಕಾಳು ಗಣೇಶ ದೇಗುಲ, ಉಗ್ರನರಸಿಂಹ, ಕಮಲ ಮಹಲ್, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇಗುಲ, ಕಲ್ಲಿನತೇರು, ಪುರಂದರ ಮಂಟಪ, ಕೊದಂಡರಾಮ ದೇಗುಲ ಸೇರಿದಂತೆ ನಾನಾ ಸ್ಮಾರಕಗಳಿಗೆ ಪ್ರವಾಸಿಗರು ಭೇಟಿ ನೀಡಿ ವೀಕ್ಷಿಸಿ ವೀಕೆಂಡ್ ಸಂಭ್ರಮಿಸಿದ್ದಾರೆ. ಹಂಪಿಯ ಸ್ಮಾರಕಗಳ ಸೊಬಗನ್ನು ವೀಕ್ಷಿಸಿದ ಪ್ರವಾಸಿಗರು ಸ್ಮಾರಕಗಳ ಬಗ್ಗೆ ಹಾಗೂ ವಿಜಯನಗರ ಚರಿತ್ರೆಯನ್ನು ಮಾರ್ಗದರ್ಶಕರಿಂದ ಮಾಹಿತಿ ಪಡೆದರು. ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ಪ್ರವಾಸಿಗರ ಕೊರತೆ ಕಂಡು ಬಂತು. ಇನ್ನೂ ಹಂಪಿ ಪರಿಸರದಲ್ಲಿನ ಕೊಪ್ಪಳದ ಆನಾಗುಂದಿ, ಅಂಜನಾದ್ರಿ, ಹಂಪಿ ಜೂ ದರೋಜಿ ಕರಡಿ ಧಾಮ, ಟಿಬಿಡ್ಯಾಮ ಸೇರಿದಂತೆ ಇತರೆ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು.