ಹೊಸಪೇಟೆ: ಧಾರ್ಮಿಕ ಕ್ಷೇತ್ರ ಹಂಪಿಯ ಶ್ರೀ ಬಡವಿ ಲಿಂಗ ದೇಗುಲದಲ್ಲಿ ಚಪ್ಪಲಿ ಹಾಕಿ ದುಷ್ಕೃತ್ಯ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹAಪಿಯ ಬಹು ಪುರಾತನ ಹಾಗೂ ಪ್ರಸಿದ್ಧ ದೇಗುಲಗಳಲ್ಲಿ ಬಡವಿಲಿಂಗ ದೇಗುಲ ಕೂಡ ಒಂದು. ಶಿವನಿಗೆ ಅರ್ಪಿತವಾದ ಒಂದು ಬೃಹದಾಕಾರದ ಶಿವಲಿಂಗ ಇಲ್ಲಿಯ ಪ್ರಧಾನ ಆಕರ್ಷಣೆಯಾಗಿದೆ. ದೇಗುಲಕ್ಕೆ ವಿಜಯನಗರ ಅರಸರ ಕಾಲುವೆಯಿಂದ ಗರ್ಭಗುಡಿಯ ಒಳಗೆ ನಿರಂತರವಾಗಿ ನೀರು ಬರುತ್ತದೆ. ನಿತ್ಯ ಪೂಜೆ ಕೂಡ ನಡೆಯುತ್ತದೆ. ದೇಗುಲದೊಳಗೆ ಕಸ ಹೋಗದಂತೆ ರಕ್ಷಣೆ ಮಾಡಲಾಗಿದೆ. ಬಾಗಿಲಿಗೆ ಸಲಾಕೆಯ ಭದ್ರತೆ ಒದಗಿಸಲಾಗಿದೆ. ಇಲ್ಲಿ ಪುರಾತತ್ವ ಇಲಾಖೆಯಿಂದ ಖಾಸಗಿ ಸೆಕ್ಯುರಿಟಿ ಕಾಲವಲು ಇರಿಸಲಾಗಿದೆ. ಆದರೂ, ಇತ್ತೀಚಿಗೆ ಯಾರೋ ಚಪ್ಪಲಿ ಹಾಕಿ ಭಕ್ತರ ಭಾವನೆಗೆ ಧಕ್ಕೆ ತಂದಿದ್ದಾರೆ.
ಇದು 3ನೇ ಬಾರಿ ಘಟನೆಯಾಗಿದ್ದು, ಘಟನೆ ಕುರಿತು, ಭಾರತೀಯ ಪುರಾತತ್ತ್ವ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದಾರೆ. ಅದರೂ, ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಆದ್ದರಿಂದ ಹಂಪಿ ಮತ್ತು ಪ್ರಕಾಶ್ ನಗರ ಸ್ಥಳೀಯರಿಗೆ , ಪ್ರವಾಸಿ ಮಾರ್ಗದರ್ಶಿಗಳು, ಆಟೋ ಚಾಲಕರು ದೇಗುಲದ ಸಂಕೀರ್ಣಕ್ಕೆ ಪ್ರವೇಶಿಸುವ ಮುನ್ನ ದೂರದಲ್ಲಿ ಪಾದರಕ್ಷೆಗಳನ್ನು ತೆಗೆದು ಒಳಗೆ ಹೋಗುವಂತೆ ಪ್ರವಾಸಿಗರಿಗೆ ಜಾಗೃತಿ ಮೂಡಿಸಬೇಕು. ಕೇಂದ್ರ ಪುರಾತತ್ವ ಇಲಾಖೆ ಹೆಚ್ಚಿನ ಭದ್ರತೆ ಒದಗಿಸಲಿ ಎಂಬುದು ಸ್ಥಳೀಯರ ಹಾಗೂ ಭಕ್ತರ ಒತ್ತಾಯವಾಗಿದೆ.
ಬಡವಿ ಲಿಂಗ ದೇಗುಲದಲ್ಲಿ ಚಪ್ಪಲಿ ಹಾಕಿದ್ದು ಗಮನಕ್ಕೆ ಬಂದಿದೆ. ಯಾರೆಂದು ತಿಳಿದಿಲ್ಲ. ಹೆಚ್ಚಿನ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. - ರಾಮಕೃಷ್ಣರೆಡ್ಡಿ, ಅಧೀಕ್ಷಕ, ಕೇಂದ್ರ ಪುರಾತತ್ವ ಇಲಾಖೆ, ಹಂಪಿ