ಹೊಸಪೇಟೆ: ಭಾರತೀಯ ಸೈನ್ಯದ ಬ್ರಿಗೇಡಿಯರ್ ರೋಹಿತ್ ಚೌದರಿ, ಮತ್ತು ಅವರ ಪತ್ನಿ ಶ್ರೀಮತಿ ಚೌದರಿ ರೋಹಿತ್ ಐತಿಹಾಸಿಕ ಹಂಪಿಯ ಸ್ಮಾರಕಗಳನ್ನು ಗುರುವಾರ ವೀಕ್ಷಿಸಿದರು.
ಬೆಳಗ್ಗೆ 7ಗಂಟೆಗೆ ಟಿಬಿ ಡ್ಯಾಮ್‌ನ ಪ್ರವಾಸಿ ಮಂದಿರ ವೈಕುಂಠದಿಂದ ವಿಜಯ ವಿಠಲ ದೇವಸ್ಥಾನಕ್ಕೆ ಆಗಮಿಸಿ ವೀಕ್ಷಿಸಿ, ಅಲ್ಲಿನ ಕೆತ್ತನೆಗಳ ಚಿತ್ರಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದರು. ನಂತರ ಹೇಮಕೂಟ, ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ, ಸಾಸಿವೆಕಾಳು ಗಣೇಶ, ಉಗ್ರ ನರಸಿಂಹ, ಬಡವಿಲಿಂಗ, ಕಮಲ್ ಮಹಲ್, ಗಜಶಾಲೆ, ರಾಜ ಪ್ರಾಂಗಣ ವೀಕ್ಷಣೆ ಮಾಡಿದರು.
ಭಾರತ ಮತ್ತು ಜಪಾನ್ ಜಂಟಿ ಸಮರಾಭ್ಯಾಸ ಮುಗಿದ ನಂತರ ಹಂಪಿಗೆ ಭೇಟಿ ನೀಡಿರುವೆ. ಇಲ್ಲಿನ ಶ್ರೀಮಂತ ಕಲೆ, ಶಿಲ್ಪಗಳ ಕೆತ್ತನೆಗಳನ್ನು ನೋಡಿ ತುಂಬಾ ಸಂತೋಷವಾಯಿತು.| ರೋಹಿತ್ ಚೌದರಿ, ಭಾರತೀಯ ಸೈನ್ಯದ ಬ್ರಿಗೇಡಿಯರ್