ಹೊಸಪೇಟೆ: ಕೊಪ್ಪಳ ಭಾಗದ ಸಣಾಪುರ ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ಹಾಗೂ ಅತ್ಯಾಚಾರ ಪ್ರಕರಣದ ನಡೆದ ಬೆನ್ನಲೇ ಎಚ್ಚೆತ್ತುಕೊಂಡಿರುವ ವಿಶ್ವ ವಿಖ್ಯಾತ ಹಂಪಿ ಪೊಲೀಸರು ಹೋಂ ಸ್ಟೇ, ಹೋಟೆಲ್, ರೆಸಾರ್ಟ್ಗಳಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲಿಸಲು ಎಂದು ಸೂಚನೆ ನೀಡಿದ್ದಾರೆ.
ಹಂಪಿಗೆ ವಾರ್ಷಿಕ 40 ಲಕ್ಷಕ್ಕೂ ಅಧಿಕ ದೇಶಿ ಹಾಗೂ 3 ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರ ಸುರಕ್ಷತೆ ಮುಖ್ಯವಾಗಿದೆ. ಈಗಾಗಲೇ ಪೊಲೀಸ್ ಇಲಾಖೆ, ಹೋಂ ಗಾರ್ಡ್, ಪ್ರವಾಸಿ ಮಿತ್ರರು, ಪುರಾತತ್ವ ಇಲಾಖೆಯ ಭದ್ರತಾ ಸಿಬ್ಬಂದಿಯೊAದಿಗೆ ಸಮನ್ವಯ ಸಾಧಿಸಿ ಹಂಪಿಯಲ್ಲಿ ಸುರಕ್ಷತೆಗೆ ಒತ್ತು ನೀಡಲಾಗಿದೆ. ಸಣಾಪುರ ಘಟನೆ ಅಮಾನವೀಯ ಘಟನೆಯಾಗಿದೆ. ಇಂತಹ ಘಟನೆಗಳು ನಡೆಯದಂತೆ ಪೊಲೀಸರಿಗೆ ಹೋಂ ಸ್ಟೇ, ಹೋಟೆಲ್, ರೆಸಾರ್ಟ್ಗಳ ಮಾಲೀಕರು ಸಹಕಾರ ನೀಡಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ.
ಸಣಾಪುರ ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ಹಾಗೂ ಅತ್ಯಾಚಾರ ಪ್ರಕರಣ ನಡೆದಿರುವ ಹಿನ್ನೆಲೆಯಲ್ಲಿ ಹಂಪಿ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹ ಅಮಾನವೀಯ ಪ್ರಕರಣ ಕಂಡು ಬಂದಿದೆ. ದೇಶ, ವಿದೇಶಿ ಪ್ರವಾಸಿಗರ ಭದ್ರತೆಯತ್ತ ದೃಷ್ಟಿಹರಿಸಬೇಕು. ಪೊಲೀಸರ ಸಹಾಯ ಪಡೆದುಕೊಳ್ಳಬೇಕು. ಯಾವುದೇ ಅಪರಿಚಿತ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದ್ದಾರೆ. ಇನ್ನೂಹೋಂ ಸ್ಟೇ ಮಾಲೀಕರೊಂದಿಗೂ ಸಭೆ ನಡೆಸಿರುವ ಸ್ಥಳೀಯ ಪೊಲೀಸರು, ನಿಯಮದಲ್ಲಿ ಸಡಿಲಿಕೆ ಮಾಡಬಾರದು, ದೇಶ, ವಿದೇಶಿ ಪ್ರವಾಸಿಗರ ಸುರಕ್ಷತೆಯೇ ಪ್ರಮುಖ ಮಾನದಂಡವಾಗಬೇಕು ಎಂದೂ ಸೂಚಿಸಿದ್ದಾರೆ.
ಹಂಪಿಯಲ್ಲಿ ಸುರಕ್ಷತೆಗೆ ಒತ್ತು ನೀಡಲಾಗಿದೆ. ಈಗಾಗಲೇ ಹಂಪಿ ಪೊಲೀಸರು ಹೋಂ ಸ್ಟೇ, ಹೋಟೆಲ್, ರೆಸಾರ್ಟ್ಗಳ ಮಾಲೀಕರ ಜತೆಗೆ ಚರ್ಚಿಸಿದ್ದಾರೆ. ಜಿಲ್ಲಾ ಮಟ್ಟದಲ್ಲೂ ಶೀಘ್ರ ಸಭೆ ನಡೆಸಲಾಗುವುದು. - ಬಿ.ಎಲ್. ಶ್ರೀಹರಿಬಾಬು, ಎಸ್ಪಿ, ವಿಜಯನಗರ.