ಹೊಸಪೇಟೆ: ತಾಲೂಕಿನ ಹಂಪಿಯಲ್ಲಿ ನಾಲ್ಕೈದು ದಿನಗಳಿಂದ ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿದ್ದ ಕೋತಿ ಸೋಮವಾರ ಬೋನಿಗೆ ಬಿದ್ದಿದೆ. ಹಂಪಿಯಲ್ಲಿ ಸಾಸ್ವಿಕಾಳು ಗಣಪತಿ, ವಿರೂಪಾಕ್ಷೇಶ್ವರ ದೇವಸ್ಥಾನ ಸುತ್ತ್ತಲಿನ ಭಾಗದಲ್ಲಿ ಕೋತಿವೊಂದು ಜನರ ಮೇಲೆ ಏಕಾಏಕಿ ದಾಳಿ ನಡೆಸುತ್ತಿತ್ತು. ಅಲ್ಲದೇ, ನಾಲ್ಕು ದಿನಗಳಿಂದ ಮೂವರಿಗೆ ಕಚ್ಚಿ ಗಾಯಪಡಿಸಿದ್ದರಿಂದ ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿತ್ತು.
ಈ ಕುರಿತು ಸ್ಥಳೀಯರ ದೂರು ಆಧರಿಸಿ ಅರಣ್ಯ ಇಲಾಖೆ ಇಲಾಖೆ ಸಿಬ್ಬಂದಿ ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿ, ಕೋತಿಯನ್ನು ಪಂಜರಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದು, ಹಂಪಿ ಜನತೆ ಹಾಗೂ ಪ್ರವಾಸಿಗರು ನಿಟ್ಟುಸಿರು ಬಿಟ್ಟಿದ್ದಾರೆ.