ಜಿಲ್ಲೆ

ಹಂಪಿಯಲ್ಲಿ ಸ್ವಚ್ಛತಾ ಪಾಕ್ಷಿಕ

ಹೊಸಪೇಟೆ: ನೆಹರು ಯುವ ಕೇಂದ್ರ, ಸಿದ್ದರಾಮೇಶ್ವರ ಕಲಾ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಹಂಪಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಪಾಕ್ಷಿಕ (ಪಖವಾಡ) ಹಾಗೂ ಹರ್ ಘರ್ ತಿರಂಗಾ ಅಭಿಯಾನ ನಡೆಯಿತು.

ಇದೇ ವೇಳೆ ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ಶಾಲಾ ಮಕ್ಕಳಿಗೆ ಚಿತ್ರಕಲೆ, ಭಾಷಣ ಮತ್ತು ಪ್ರಬಂಧ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಹಂಪಮ್ಮ, ಸಿದ್ದರಾಮೇಶ್ವರ ಕಲಾ ಸಂಸ್ಕೃತಿಕ ಸಂಘದ ವಿರೂಪಾಕ್ಷಿ ವಿ., ಗ್ರಾಪಂ ಸದಸ್ಯ ಎಸ್.ಹನುಮಂತ, ರೂಪಾ, ಕಾರ್ಯದರ್ಶಿ ಕೆ. ಕೊಟ್ರೇಶ್, ಮುಖ್ಯಶಿಕ್ಷಕಿ ರೇಣುಕಾ ಟಪಾಲ್, ಊ. ಹುಲುಗಪ್ಪ ಇದ್ದರು.