ಹೊಸಪೇಟೆ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಚುನಾವಣೆ ದಿನೇ ದಿನೆ ರಂಗೇರುತ್ತಿದೆ. ನಗರದ ಬಳ್ಳಾರಿ ರಸ್ತೆಯಲ್ಲಿನ ಸರ್ದಾರ್ ಪಟೇಲ್ ಸರ್ಕಾರಿ ಪ್ರೌಢಾ ಶಾಲೆಯಲ್ಲಿ ನ.16ರಂದು 5 ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ.
ಜಿಲ್ಲೆಯಲ್ಲಿ 1355 ಮತದಾರರು 61 ನಿರ್ದೇ ಶಕರು ಆಯ್ಕೆಯಾಗಬೇಕಿದೆ. ಈಗಾಗಲೇ 42 ಸ್ಥಾನಗಳಿಗಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕೈಗಾರಿಕ, ಕಾರ್ಮಿಕ ಇಲಾಖೆ, ಪಿಯು ಕಾಲೇಜು ಮತ್ತು ಆಡಳಿತ ಕಚೇರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಯಾಗಿಲ್ಲ. ಜಿಲ್ಲಾ ಆಸ್ಪತ್ರೆ, ರಾಜ್ಯ ಲೆಕ್ಕ ಪತ್ರ ಇಲಾಖೆ, ಹಿಂದುಳಿದ ವರ್ಗ ಹಾಗಾಉ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ತಲ ಒಂದು ಸ್ಥಾನ, ಕಂದಾಯ ಇಲಾಖೆ 3 ಸ್ಥಾನ, ಆರೋಗ್ಯ ಇಲಾಖೆ 4 ಸ್ಥಾನ, ಪ್ರಾಥಮಿಕ ಶಾಲೆ 5, ಪ್ರೌಢಾ ಶಾಲೆ 2 ಸೇರಿದಂತೆ 17 ಸ್ಥಾನಗಳಿಗೆ 37 ನಿರ್ದೇಶಕ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿದೆ. ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ಚುನಾವಣೆ ನಡೆಯಲಿದೆ. ನಂತರ ಫಲಿತಾಂಶ ಪ್ರಕಟ ಆಗಲಿದೆ.
ಅಂತಿಮ ಕಣದಲ್ಲಿ ಇರುವ ಕೆಲ ಅಭ್ಯರ್ಥಿಗಳು ಸಿಂಡಿಕೇಟ್ ಮಾಡಿಕೊಂಡು ತಮ್ಮ ಭಾವಚಿತ್ರ ಒಳಗೊಂಡ ಕರಪತ್ರ ಮಾಡಿಸಿ, ಸರ್ಕಾರಿ ಇಲಾಖೆ ಸಿಬ್ಬಂದಿ(ಮತದಾರ) ಮನೆ ಬಾಗಿಲಿಗೆ ಎಡತಾಕಿ ಮತ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಇಲಾಖೆಗೆ ರಜೆ ಇಲ್ಲದ ದಿನಗಳಲ್ಲಿಯೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಸ್ಥಳಕ್ಕೇ ಭೇಟಿ ನೀಡಿ, ತಮಗೇ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ. ಬೆಳ್ಳಿ, ಗೃಹ ಉಪಯೋಗಿ ವಸ್ತುಗಳನ್ನು ಮತದಾರರಿಗೆ ನೀಡಿದರೆ, ಗುಂಡು ತುಂಡಿನ ಪಾರ್ಟಿ ಮೂಲಕ ತಮ್ಮತ್ತ ಸೆಳೆಯುವ ಕೆಲಸ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಜಿಲ್ಲೆಯಲ್ಲಿ ವಿವಿಧ ಇಲಾಖೆಯಿಂದ 1355 ಮತದಾರರಿದ್ದಾರೆ. 42 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. 17 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಭಾವಚಿತ್ರವುಳ್ಳ ಗುರುತಿನ ಚೀಟಿ ತಂದು ಮತದಾನ ಮಾಡಬಹುದು. ಲಿಯಾಕತ್ ಅಲಿ, ಜಿಲ್ಲಾ ಚುನಾವಣಾಧಿಕಾರಿ, ಹೊಸಪೇಟೆ