ಹೊಸಪೇಟೆ: ಅಡವಿಟ್ಟ ಚಿನ್ನಾಭರಣ ಮರಳಿ ಕೊಡಲು ನಾಲ್ಕು ತಿಂಗಳಿಂದ ಸತಾಯಿಸಲಾಗುತ್ತಿದೆ ಎಂದು ಅಸಮಾಧಾನಗೊಂಡ ತಾಲೂಕಿನ ಕಮಲಾಪುರದ ಹುಲುಗಪ್ಪ ತನ್ನ ಸಹೋದರರೊಂದಿಗೆ ಬ್ಯಾಂಕ್ ಸಿಬ್ಬಂದಿಯನ್ನು ಹೊರಹಾಕಿ ಎಸ್ ಬಿಐಗೆ ಸೋಮವಾರ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ತಾಯಿ ಜೀವಂತವಿದ್ದಾಗಲೇ ಅಂದಾಜು 15 ತೊಲ ಚಿನ್ನಾಭರಣಗಳನ್ನು ಹುಲಗಪ್ಪ ಮತ್ತು ಸಹೋದರು ಬ್ಯಾಂಕಿನಲ್ಲಿ ಅಡವಿಟ್ಟು, ಒಂಬತ್ತು ಲಕ್ಷ ರೂ. ಸಾಲ ಪಡೆದಿದ್ದರು. ತಾಯಿ ಮೃತಪಟ್ಟ ನಂತರ ಬ್ಯಾಂಕ್ ಕೇಳಿದ ದಾಖಲೆಗಳನ್ನು ನೀಡಿದ್ದಾರೆ. ಸಾಲ ಮರುಪಾವತಿಯೂ ಮಾಡಿದ್ದಾರೆ. ಚಿನ್ನಾಭರಣ ವಾಪಸು ಕೊಡುವಂತೆ ವಾರಕ್ಕೆ ಮೂರಾಲ್ಕು ದಿನ ಬ್ಯಾಂಕ್‌ಗೆ ಅಲೆದಿದ್ದಾರೆ. ಆದರೆ, ಚಿನ್ನಾಭರಣ ವಾಪಸು ಮಾಡಲು ಬ್ಯಾಂಕಿನವರು ವಿಳಂಬ ಮಾಡಿದ್ದಾರೆ. ನಾಲ್ಕು ತಿಂಗಳಿಂದ ಅಲೆದಾಟ ನಡೆದಿದೆ. ಇವರ ಬಳಿ ಅಡವಿಟ್ಟ ಚಿನ್ನ ಇದೆಯೋ-ಇಲ್ಲವೋ? ಚಿನ್ನಾಭರಣವೇಕೆ ವಾಪಸು ನೀಡುತ್ತಿಲ್ಲ ಎಂದು ಆಕ್ರೋಶಗೊಂಡ ಹುಲುಗಪ್ಪ ಮತ್ತಿತರರು ಸೋಮವಾರ ವ್ಯವಸ್ಥಾಪಕ ಸೇರಿದಂತೆ ಸಿಬ್ಬಂದಿಯನ್ನು ಬ್ಯಾಂಕ್‌ನಿಂದ ಹೊರ ಕರೆತಂದು, ಒಂದು ತಾಸಿಗೂ ಹೆಚ್ಚು ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು. ಮೇಲಧಿಕಾರಿಗಳು ಸ್ಥಳಕ್ಕಾಗಮಿಸಿ ಹುಲುಗಪ್ಪ ಮತ್ತವರ ಸಂಬಂಧಿಗಳನ್ನು ಸಮಾಧಾನ ಪಡಿಸಿದರು.
ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನ ನಿಯಾಮನು ಸಾರ ಮರಳಿಸ ಬೇಕು. ಅವರು ಸಾಲ ಕಟ್ಟಿದ್ದಾರೆ. ಇದರಲ್ಲಿ ಬೇರೆ ಸಮಸ್ಯೆಗಳಿಲ್ಲ. ಎಲ್ಲ ವರದಿಯನ್ನು ಮೇಲಧಿಕಾರಿಗಳಿಗೆ ಕಳಿಸಲಾಗಿದೆ. ಅನುಮೋದನೆ ಆದ ಕೂಡಲೆ ಗ್ರಾಹಕರಿಗೆ ಚಿನ್ನ ಮರಳಿಸುತ್ತೇವೆ. ಗೋವಿಂದ್ ಚಂದ್ರಜನ, ಎಸ್‌ಬಿಐ ಹಿರಿಯ ಮ್ಯಾನೇಜರ್, ವಿಭಾಗಿಯ ಶಾಖೆ, ಹೊಸಪೇಟೆ ಬ್ಯಾಂಕ್‌ನಲ್ಲಿ ನಮ್ಮ ತಾಯಿ ಹೆಸರಿನಲ್ಲಿ ಚಿನ್ನಾಭರಣ ಅಡವಿಟ್ಟಿದ್ದೇವೆ. ತಾಯಿ ಮೃತಪಟ್ಟ ನಂತರ ಬ್ಯಾಂಕ್‌ನಲ್ಲಿ ಸಾಲದ ಹಣ ಪಾವತಿಸಲಾಗಿದೆ. ನಾಲ್ಕು ತಿಂಗಳಿಂದ ಅಲೆಯುತ್ತಿದ್ದೇವೆ. ಅವರಿಗೆ ಬೇಕಿದ್ದ ಎಲ್ಲ ದಾಖಲೆ, ಸಾಕ್ಷ್ಯ-ಆಧಾರಗಳನ್ನು ನೀಡಿದ್ದೇವೆ. ಆದರೂ, ನಮ್ಮ ಚಿನ್ನ ಮರಳಿ ಕೊಡುತ್ತಿಲ್ಲ. ಒಂದಲ್ಲ ಒಂದು ಕಾರಣ ಹೇಳಿ ಅಲೆಸುತ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿ ಮೇಲೆ ಅನುಮಾನ ಬರುತ್ತಿದೆ. ಹುಲಗಪ್ಪ ಬ್ಯಾಂಕ್ ಗ್ರಾಹಕ, ಕಮಲಾಪುರ