minister zameer khan 
ಜಿಲ್ಲೆ

ಕುಮಾರಸ್ವಾಮಿ ಹೇಳಿದ  ಪೆನ್ ಡ್ರೈವ್ ಇದಾನ?

ಹೊಸಪೇಟೆ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣನರನ್ನು ಉಚ್ಚಾಟನೆ ಮಾಡಿದ್ದು ಅವರ ಪಕ್ಷದ ಆಂತರಿಕ ವಿಚಾರ ಎಂದು ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಅಹ್ಮದ್  ಖಾನ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದಾರೆ. ಅನ್ನೋದನ್ನ ನಾನು ಮಾಧ್ಯಮದಲ್ಲೇ ನೋಡಿ ತಿಳ್ಕೊಂಡಿದ್ದು. ಬಿಜೆಪಿಯವರಿಗೆ ಯಾರು ಯಾವ ದೇಶಕ್ಕೆ ಹೋಗ್ತಾರೆ ಅನ್ಮೋದು ಗೊತ್ತಾಗ್ತದೆ. ನಮ್ಮ ಪ್ರಿಯಾಂಕಾ ಗಾಂಧಿ ಹೋಗಿದ್ದೇಲ್ಲಾ ಹೇಳ್ತಾರೆ. ಆದರೆ ಪ್ರಜ್ವಲ್ ರೇವಣ್ಣ ಹೋಗಿದ್ದು, ಬಿಜೆಪಿಗೆ ಗೊತ್ತಾಗೋಲ್ವಾ?  ಮೇಲೆ ಎಫ್ ಐ ಆರ್ ಆಗಿದೆ. ಎಸ್.ಐಟಿ ತನಿಖೆ ನಡೆಸ್ತಿದೆ. ಅವರ ಕೆಲಸ ಅವರು ಮಾಡ್ತಿದ್ದಾರೆ.

ಆಗಾಗ ಕುಮಾರಸ್ವಾಮಿ ಅವರು ಪೇನ್ ಡ್ರೈವ್ ತೋರಿಸ್ತಿದರಲ್ಲ, ಆ ಪೆನ್ ಡ್ರೈವ್ ಇದೇ ಪೇನ್ ಡ್ರೈವ್ ಇರಬಹುದು. ನಾನು ಈ ಹಿಂದೆನೇ ಹೇಳಿದ್ದೆ, ಅವರ ಪೆನ್ ಡ್ರೈವ್ ವರ್ಕೌಟ್ ಆಗೋಲ್ಲಾ ಅಂತ. ಕಾಂಗ್ರೆಸ್ ನಾಯಕರದ್ದು ಇದೆ, ಅಂತಾರಲ್ಲಾ, ಇದ್ದರೆ ಬಿಡುಗಡೆ ಮಾಡಲಿ ಬಿಡಿ. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಅಂತಹವರು ಯಾರೂ ಇಲ್ಲಾ ಎಂದರು.