ಜಿಲ್ಲೆ

ಮಳೆಯಲ್ಲೇ ಕುಣಿದು ಸಂಭ್ರಮ

ಹೊಸಪೇಟೆ: ಗಣೇಶ ಚತುರ್ಥಿಯ ಮೂರನೇ ದಿನವೂ ವರೂಣನ ಆರ್ಭಟ ಮುಂದುವರಿದಿದೆ. ಮಳೆಯನ್ನು ಲೆಕ್ಕಿಸದೇ ಭಕ್ತರು ಗಣೇಶನ ವಿಸರ್ಜನೆ ಮೆರವಣಿಗೆ ನಡೆಸಿದರು.

ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಶುಕ್ರವಾರ ಬೆಳಿಗ್ಗೆ ಸ್ವಲ್ಪ ವಿರಾಮ ನೀಡಿದ್ದರೂ, ಸಂಜೆ ವೇಳೆಗೆ ಮತ್ತೆ ಸುರಿಯತೊಡಗಿತು. ಈ ವೇಳೆ ಭಕ್ತರು ಗಣೇಶನ ಮೂರ್ತಿಗೆ ಛತ್ರಿ ಹಿಡಿದುಕೊಂಡು ಮೆರವಣಿಗೆಯನ್ನು ಮುಂದುವರೆಸಿದರು. ಮತ್ತೊಂದೆಡೆ, ಕೆಲವು ಯುವಕರು ಮಳೆಯನ್ನು ಲೆಕ್ಕಿಸದೆ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.