ಮರಿಯಮ್ಮನಹಳ್ಳಿ: ಲಲಿತ ಕಲೆಗಳು ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಹೊಸಪೇಟೆಯ ಸಂಶೋಧಕ ಡಾ.ಕೆ.ರವೀಂದ್ರನಾಥ ಹೇಳಿದರು.
ತಾಲೂಕಿನ ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ನಡೆದ ಬಿ.ಲಿಂಗಮ್ಮ, ಡಾ.ಬಿ.ಅಂಬಣ್ಣ, ಡಿ.ದುರ್ಗಾದಾಸ್, ಗಿರಿಜಮ್ಮ ಕರಿಬಸಪ್ಪ ಅವರ ದತ್ತಿ ನೆರವಿನೊಂದಿಗೆ ಲಲಿತಕಲಾ ರಂಗದ 39ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಐರೊಪ್ಯ ಶೈಕ್ಷಣಿಕ ಸಂಪ್ರದಾಯಗಳಲ್ಲಿ ಲಲಿತಕಲೆ ಎಂದರೆ ಮುಖ್ಯವಾಗಿ ಸೌಂದರ್ಯಕ್ಕಾಗಿ ಬೆಳಸಲಾದ ಕಲೆಯಾಗಿದೆ. ಅಂದರೆ ಅವರ ದೃಷ್ಠಿಯಲ್ಲಿ ಅನ್ವೆಯಿಕ ಕಲೆಯಿಂದ ಭಿನ್ನವಾದ ಅಂಲಕಾರಿಕ ಕಲೆ ಎಂಬ ಸೀಮಿತ ಅರ್ಥದಲ್ಲಿ ಭಾವಿಸಲಾಗಿದೆ. ಆದರೆ ಭಾರತೀಯ ಕಲಾವಿದನ ಕಲ್ಪನೆಯ ಸೃಜನಶೀಲವಾದ ಸಂಪೂರ್ಣ ಅಭಿವ್ಯಕ್ತಿ ಮತ್ತು ಪ್ರದರ್ಶನ ಗೊಂಡಿರುವುದು ಲಲಿತಕಲೆಯೆನಿಸಿದೆ ಎಂದರು.
ಲಲಿತಕಲೆಗಳಲ್ಲಿ ಮುಖ್ಯವಾಗಿ ಚಿತ್ರಕಲೆ, ಶಿಲ್ಪಕಲೆ, ವಾಸ್ತುಶಿಲ್ಪ, ಸಂಗೀತ ಮತ್ತು ಕಾವ್ಯಗಳ ಜತೆಗೆ ಪ್ರದರ್ಶನ ಕಲೆಗಳಾದ ನಾಟಕ ಹಾಗೂ ನೃತ್ಯಗಳು ಪ್ರಧಾನವಾಗಿದೆ. ಕಳೆದ 40 ವರ್ಷಗಳಿಂದ ಗ್ರಾಮೀಣ ಪರಿಸರದಲ್ಲಿ ಕಲಾವಿದರನ್ನು ಒಗ್ಗೂಡಿಸಿಕೊಂಡು ಕಲಾವಿದರ ಕಲಾಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸಿ ಕಲಾವಿದನ್ನು ಬೆಳೆಸಿದ ಕೀರ್ತಿ ಮರಿಯಮ್ಮನಹಳ್ಳಿಯ ಲಲಿತಕಲಾರಂಗಕ್ಕೆ ಸಲ್ಲುತ್ತದೆ ಎಂದರು.
2023-24ನೇ ಸಾಲಿನ ಪದ್ಮರಾಜ್ ಜೈನ್, ನೇಮಿರಾಜ್ ಜೈನ್ ಸ್ಮರಣಾರ್ಥ ನಗದು ಪುರಸ್ಕಾರದೊಂದಿಗೆ ಕಲಾನಿ ಪ್ರಶಸ್ತಿಯನ್ನು ಮರಿಯಮ್ಮನಹಳ್ಳಿಯ ಹಿರಿಯ ರಂಗಕಲಾವಿದೆ ಸಿ.ಗಂಗಮ್ಮ ನೀಡಿ ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕ ಬಿ.ಎಂ.ಎಸ್. ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದರು. ಸಭೆಯ ನಂತರ ಗೊ.ರು. ಚನ್ನಬಸಪ್ಪ ರಚಿಸಿರುವ, ಕೆ.ಶಿವರುದ್ರಯ್ಯ ನಿರ್ದೇಶನ, ಮ.ಬ.ಸೋಮಣ್ಣ ಮಾರ್ಗದರ್ಶನ, ಹ್ಯಾಟಿ ಮಂಜುನಾಥ ಸಹ ನಿರ್ದೇಶನದಲ್ಲಿ ಬೆಳ್ಳಕ್ಕಿ ಹಿಂಡು ಬೆದರ್ಯೋವೋ ನಾಟಕ ಪ್ರದಶನಗೊಂಡಿತು.
ನಿವೃತ್ತ ಶಿಕ್ಷಕ ಬಿ.ಎಂ.ಎಸ್. ಮೃತ್ಯುಂಜಯ, ಪ್ರಮುಖರಾದ ರಸೂಲ್ ಸಾಹೇಬ್, ಮಲ್ಲನಗೌಡ, ಉಮೇಶ್, ಮಡಿವಾಳರ ಮಂಜುನಾಥ, ರಂಗಪರಿಕರ ಬಿ.ಎಂ.ಎಸ್.ಮೃತ್ಯುAಜಯ ಇತರರಿದ್ದರು.