ಹಂಪಿ ಸಮೀಪದ ಕಡ್ಡಿರಾಂಪುರ ಗ್ರಾಮದಲ್ಲಿ ಸೋಮವಾರ ಮುರುಗನ್ ದೇವಸ್ಥಾನದಲ್ಲಿ ಅಡಿ ಕೀರ್ತಿಕೆಯ 51ನೇ ವಾರ್ಷಿಕೋತ್ಸವ ಕಾರ್ಯಕ್ರಮ ಭಕ್ತಿಯಿಂದ ಮತ್ತು ವೈಭವದಿಂದ ನಡೆಯಿತು. 
ಜಿಲ್ಲೆ

ವೈಭವದ ಮುರುಗನ್ ಅಡಿ ಕೀರ್ತಿಕೆಯ

ಮಂಜುನಾಥ

ಹೊಸಪೇಟೆ : ತಾಲೂಕಿನ ಕಡ್ಡಿರಾಂಪುರ ಗ್ರಾಮದಲ್ಲಿ ಸೋಮವಾರ ಮುರುಗನ್ ದೇವಸ್ಥಾನದಲ್ಲಿ ಅಡಿ ಕೀರ್ತಿಕೆಯ 51ನೇ ವಾರ್ಷಿಕೋತ್ಸವ ಕಾರ್ಯಕ್ರಮ ವೈಭವದಿಂದ ನಡೆಯಿತು.

ಕಡ್ಡಿರಾಂಪುರ ಗ್ರಾಮದ ಮುರುಗನ್ ದೇವಸ್ಥಾನದಲ್ಲಿ ಬೆಳಗ್ಗೆ ದೇವರಿಗೆ ಸುಂದರ ಅಂಲಕಾರ ಮಾಡಲಾಯಿತು. ಜತೆಗೆ ಕಾವಡಿಗಳು, ಹೂವಿನ ಕಾವಡಿಗಳು, ಹಾಲಿನ ಕಾವಡಿಗಳು, ಗುಂಡು ಅಲಗು ಮತ್ತು ಸುಬ್ರಹ್ಮಣ್ಯ ಸ್ವಾಮಿ ಶೂಲಾಯುಧವನ್ನು ಹೊತ್ತು ಸ್ವಾಮಿಯ ದೇವಸ್ಥಾನಕ್ಕೆ ತಲುಪಿ ಭಕ್ತರು ದೇವರಿಗೆ ಅಲಗುಗಳನ್ನು ಪ್ರತಿಷ್ಠಾಪಿಸಿದರು.

ಹಂಪಿಗೆ ಹೋಗುವ ಮಾರ್ಗದಲ್ಲಿ ಬರುವ ತುರ್ತು ಕಾಲುವೆಯಿಂದ ಕಡ್ಡಿರಾಂಪುರ ಗ್ರಾಮದವ ಸುಬ್ರಹ್ಮಣ್ಯ ದೇವಸ್ಥಾನದವರೆಗೆ ಭಕ್ತರು ಬೆನ್ನಿಗೆ ಕಬ್ಬಿಣದ ಸರಳು ಚುಚ್ಚಿ ತಮ್ಮ ಹರಕೆ ತೀರಿಸಿದರು. ಬೆನ್ನಿಗೆ ಮತ್ತು ಹೊಟ್ಟೆಗೆ ಮತ್ತು ಬಾಯಿಗೆ ಕಬ್ಬಿಣದ ಸರಳುಗಳನ್ನು ಚುಚ್ಚಿಸಿಕೊಂಡು ಅಡಿಕೀರ್ತಿ ಎಂಬ ಹೆಸರಲ್ಲಿ ಹರಕೆ ತೀರಿಸುತ್ತಾರೆ. ಇನ್ನೂ ಕೆಲವರು ತಮ್ಮ ಬೆನ್ನಿಗೆ ಕಬ್ಬಿಣದ ಸರಳು ಹಾಕಿಕೊಂಡು ಕಲ್ಲು, ಗುಂಡನ್ನು ಸುಮಾರು ದೂರು ಎಳೆಯುತ್ತಾ ತಮ್ಮ ಹರಕೆ ತೀರಿಸುತ್ತಿದ್ದರು.

ದೇವಸ್ಥಾನದ ವ್ಯವಸ್ಥಾಪಕ ಇ.ಶಂಕರ ವೇಲು, ಇ.ಸೆಲ್ವರಾಜ್, ವೆಂಕಟೇಶ್, ಮುರುಗ£ ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು.